ತೇರದಾಳ: ಪಟ್ಟಣದ ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳದ(ಗುರುಕುಲ) ಮಂಗಲ ಕಾರ್ಯಾಲಯದಲ್ಲಿ ಸುಮಾರು 71 ಜನರನ್ನು ತಡರಾತ್ರಿ ತಡರಾತ್ರಿಯಲ್ಲಿ ಕ್ವಾರಂಟೈನ ಮಾಡಲಾಗಿದೆ. ಪಕ್ಕದ ರಾಜ್ಯ ಮಹಾರಾಷ್ಟ್ರದ ಜಯಸಿಂಗಪೂರದಿಂದ 51 ಜನರನ್ನು ಮತ್ತು ಗಡಹಿಂಗ್ಲಜದಿಂದ 19 ಜನರನ್ನು ಒಟ್ಟು 71 ಜನರನ್ನು ಕ್ವಾರಂಟೈನ ಮಾಡಲಾಗಿದೆ. ಈ ಎಲ್ಲ ಜನರು ಕಡುಬಡವರಾಗಿದ್ದು ಇವರಲ್ಲಿ ಮಕ್ಕಳು, ವಯೋವೃದ್ಧರು ಇದ್ದಾರೆ. ಇವರು ತೇರದಾಳದಿಂದ ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಕೂಲಿಗಾಗಿ ದುಡಿಯಲು ಹೋದ ಜನ ಅವರನ್ನು ಸರ್ಕಾರದ ಆದೇಶದ ಮೇರೆಗೆ ಕರೆತಂದು, ತಾಲೂಕಾ ಆಡಳಿತ ಅವರನ್ನು ಜನವಸತಿ ಪ್ರದೇಶದಲ್ಲಿ ರಾತ್ರೋರಾತ್ರಿ ಕ್ವಾರಂಟೈನ ಮಾಡಿದೆ. ಈ ಘಟನೆಯನ್ನು  ಅರಿತ ಸ್ಥಳೀಯರು ಮುಂಜಾನೆ ವಾಕಿಂಗಗೆ ಬಂದಾಗ ಭಯಭೀತರಾಗಿ ಏನು ಮಾಡುವುದು ತಿಳಿಯದೆ ತಾಲೂಕಾ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. 

            ಕ್ವಾರಂಟೈನ್ ಮಾಡಿದ ಸ್ಥಳದ ಪಕ್ಕದಲ್ಲಿಯೇ ಶಾಲಾ/ಕಾಲೇಜುಗಳು, ಗ್ರಾಮೀಣ ಆಯುರ್ವೇಧಿಕ್ ಮೆಡಿಕಲ್ ಕಾಲೇಜಿನ ಆಸ್ಪತ್ರೆ, ಶಿಕ್ಷಕರ ಕಾಲೋನಿ, ಲಂಬಾಣಿ ತಾಂಡಾ ಮತ್ತು ದೇವರಾಜ ನಗರದ ನಿವಾಸಿಗಳು ವಾಸವಾಗಿದ್ದಾರೆ. ಸದರಿ ಕ್ವಾರಂಟೈನ ಮಾಡುವ ಸಂಧರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲದಾರ ಪ್ರಶಾಂತ ಚನಗೊಂಡ, ಬನಹಟ್ಟಿಯ ಸಿ.ಪಿ.ಐ. ಜೆ.ಕರುಣೇಶಗೌಡ ಮತ್ತು ಸ್ಥಳಿಯ ಠಾಣಾಧೀಕಾರಿಗಳಾದ ವಿಜಯ ಕಾಂಬಳೆ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.