ತೇರದಾಳದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ಬೇರೆ ರಾಜ್ಯಗಳಿಂದ ಬಂದಿರುವ ಜನರ ಮನೆಗೆ ಭೇಟಿ ನೀಡಿದ್ದು.
ಬೇರೆ ರಾಜ್ಯಗಳಿಂದ ಬಂದವರನ್ನು ಕೋರೊಂಟೈನ್
ತೇರದಾಳ : ಬೇರೆ ರಾಜ್ಯಗಳಿಂದ ಬಂದಿರುವ ಏಳು ಜನರನ್ನು ಕೋರೊಂಟೈನ ಮಾಡಲಾಗಿದೆ ಎಂದು ಸರಕಾರಿ ವೈದ್ಯಾಧಿಕಾರಿ ಡಾ.ಸುದರ್ಶನ್ ನಿಡೋಣಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಸಂಭಂದಿಕರೊಬ್ಬರು ಹೆರಿಗೆಯಾಗಿದ್ದರಿಂದ ಅವರನ್ನು ನೋಡಲು ಪಟ್ಟಣದ ಒಂದೇ ಕುಟುಂಬದ ಏಳು ಜನರು ಹೋಗಿದ್ದರು. ಮತ್ತೆ ಅಲ್ಲಿಂದ ಮರಳಿ ಬಂದಿದ್ದರು. ಅವರನ್ನು ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಕೋರೊಂಟೈನ್ ಮಾಡಿದ್ದೇವೆ. ಇತ್ತಿಚಿಗೆ ಸರಕಾರ ಮಾಡಿರುವ ಆದೇಶದಂತೆ ಬೇರೆ ರಾಜ್ಯಗಳಿಂದ ಪಟ್ಟಣಕ್ಕೆ ಬಂದಿರುವವರ ಮೇಲೆ ನಿಗಾ ಇಟ್ಟು ಅಂತವರು ಎಲ್ಲಿಯಾದರೂ ಕಂಡು ಬಂದಲ್ಲಿ ಅವರನ್ನು 15ದಿನಗಳವರೆಗೆ ಗೃಹ ಬಂಧನ ಮಾಡಬೇಕು ಎಂದು ಸರಕಾರದ ಆದೇಶವಿರುವುದರಿಂದ ಅವರನ್ನು ಕೊರೊಂಟೈನ್ ಮಾಡಿರುತ್ತೇವೆ ಎಂದು ಅವರು ತಿಳಿಸಿದರು.
ಈಗಾಗಲೇ ಅವರ ಆರೋಗ್ಯ ತಪಾಸಣೆಯನ್ನು ಮಾಡಲಾಗಿದ್ದು. ಅವರಲ್ಲಿ ಯಾವುದೇ ರೀತಿಯ ಕೊರೊನಾ ರೋಗದ ಬಗ್ಗೆ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಅವರನ್ನು ಗ್ರಹ ಬಂಧನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್‍ಐ ವಿಜಯ ಕಾಂಬಳೆ ಸೇರಿದಂತೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿಯವರು, ಆಶಾ ಕಾರ್ಯಕರ್ತರು, ಪೋಲಿಸ್ ಸಿಬ್ಬಂದಿ ಇದ್ದರು.
Social Plugin