*NEWS UPDATE*
*ಹೊಸ ರೀತಿಯಲ್ಲಿ ಲಾಕ್ ಡೌನ್ 4 ನೇ ಹಂತ ದೇಶದಲ್ಲಿ ಜಾರಿ - ಮೋದಿ ಹೇಳಿಕೆ.*
ನವ ರೀತಿಯಲ್ಲಿ ಭಾರತೀಯರು ಮುಂದಿನ ಹೆಜ್ಜೆಯಿರಿಸಬೇಕು.
ಈವರೆಗಿನ ಲಾಕ್ ಡೌನ್ ಗಿಂತ 4 ನೇ ಹಂತದ ಲಾಕ್ ಡೌನ್ ಭಿನ್ನವಾಗಿರಲಿದೆ.
ಭಾರತೀಯರಿಗೆ ಕರೋನಾ ಹೋರಾಟದಲ್ಲಿ ಸಹಕರಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ ಪ್ರಧಾನಿ.
ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ - ದೇಶದ ಆಥಿ೯ಕತೆ ಬಲಗೊಳಿಸಿ - ಪ್ರಧಾನಿ ಮೋದಿ ಸಂದೇಶ
ಆತ್ಮ ನಿಭ೯ರ ಭಾರತ ನಮ್ಮೆಲ್ಲರ ಸಂಕಲ್ಪವಾಗಬೇಕು - ಪ್ರಧಾನಿ ಕರೆ.
ಕರೋನಾ ವಿರುದ್ದ ಭಾರತೀಯರು ಸ್ವಾವಲಂಭನೆ, ಆತ್ಮವಿಶ್ವಾಸದ ಹೋರಾಟಕ್ಕೆ ಮುಂದಾಗೋಣ. - ಮೋದಿ ಕರೆ.
ದೇಶದ ಜನತೆಯನ್ನುದ್ದೇಶಿಸಿ 34 ನಿಮಿಷಗಳ ಕಾಲ ಪ್ರಧಾನಿ ಭಾಷಣ
ಲಾಕ್ ಡೌನ್ - 5 ನೇ ಬಾರಿಗೆ ದೇಶದ ಜನತೆಗೆ ಸಂದೇಶ ನೀಡಿದ ಪ್ರಧಾನಿ.
ಆತ್ಮನಿಭ೯ರ ಭಾರತ ಅಭಿಯಾನದ ಅಂಗವಾಗಿ 20 ಲಕ್ಷ ಕೋಟಿ ರುಪಾಯಿಗಳ ವಿಶೇಷ ಆಥಿ೯ಕ ಪ್ಯಾಕೇಜ್ ಘೋಷಣೆ.
ಜಿಡಿಪಿಯ 10 ರಷ್ಟು ಆಥಿ೯ಕ ಪ್ಯಾಕೇಜ್ ಘೋಷಣೆ .
ರೈತರು, ಉದ್ಯಮಿಗಳು, ಬಡವರು, ಕಾಮಿ೯ಕರೂ ಸೇರಿದಂತೆ ವಿವಿಧ ರಂಗಗಳಿಗೆ ಸೇರಿದ ಜನತೆಯ ಬಲಕ್ಕೆ ಆಥಿ೯ಕ ಪ್ಯಾಕೇಜ್ ಘೋಷಣೆ.
ದೇಶದ ಮಧ್ಯಮ ರಂಗದ ಜನತೆ ಸೇರಿದಂತೆ ಭಾರತದ ಆಥಿ೯ಕತೆಯ ಆಧಾರ ಸ್ಥಂಬಗಳಿಗೆ ಈ ಕೊಡುಗೆ.
ದೇಶದ ವಿತ್ತ ಸಚಿವರಿಂದ ಹಂತಹಂತವಾಗಿ ಆಥಿ೯ಕ ಪ್ಯಾಕೇಜ್ ನ ಸ್ವರೂಪದ ಬಗ್ಗೆ ವಿವರವಾದ ಮಾಹಿತಿ ದೊರಕಲಿದೆ.
ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಮತ್ತಷ್ಟು ಬಲ ದೊರಕಿಸುವ ನಿಟ್ಟಿನಲ್ಲಿ ಈ ಪ್ಯಾಕೇಜ್.
ಕರೋನಾದಿಂದಾಗಿ ಸ್ಳಳೀಯ ಉದ್ಯಮಗಳು ಸಂಕಷ್ಟಕ್ಕೊಳಗಾಗಿದೆ. ಸಂಕಟದ ಸಂದಭ೯ಗಳಲ್ಲಿ ಸ್ಥಳೀಯ ಉದ್ಯಮಗಳೇ ನಮ್ಮ ನೆರವಿಗೆ ಬಂದಿತ್ತು.
ಕಾಲ ನಮಗೆ ಸರಿಯಾದ ಪಾಠ ಕಲಿಸಿದೆ. ಗ್ಲೋಬಲ್ ಟ್ರೆಂಡ್ ಗಳೂ ಮೊದಲು ಸ್ಥಳೀಯ ಉದ್ಯಮಗಳಾಗಿಯೇ ಇದ್ದವು.
ಸಂಕಟದ ಸಮಯದಲ್ಲಿ ಸ್ಥಳೀಯ ಉದ್ಯಮಗಳೇ ದೇಶವನ್ನು ರಕ್ಷಿಸಿದೆ - ಪ್ರಧಾನಿ ಶ್ಲಾಘನೆ.
*ಪ್ರತೀಯೋವ೯ ಭಾರತೀಯನೂ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ - ಪ್ರಧಾನಿ ಕರೆ.*
ಆ ಮೂಲಕ ಸ್ಥಳೀಯ ಉದ್ಯಮಿಗಳಿಗೆ ಆಥಿ೯ಕವಾಗಿ ನೆರವಾಗಿ - ದೇಶದ ಆಥಿ೯ಕತೆಗೆ ಚೈತನ್ಯ ನೀಡಿ.
ಮಾಸ್ಕ್ ಧರಿಸಿಯೇ ಜೀವನ ಸಾಗಿಸುತ್ತೇವೆ. ಲಾಕ್ ಡೌನ್ ನ 4 ನೇ ಹಂತದಲ್ಲಿ ಸಂಪೂಣ೯ವಾಗಿ ಹೊಸ ರೀತಿಯ ನಿಯಮಗಳಿಂದ ಕೂಡಿರುತ್ತದೆ.
ರಾಜ್ಯಗಳಿಂದ ಲಭಿಸಿದ ಮಾಹಿತಿ ಅನುಸಾರವಾಗಿ ಮೇ 17 ರೊಳಗಾಗಿ ಅಂತಿಮ ನಿಧಾ೯ರ ಕೈಗೊಳ್ಳಲಿದ್ದೇವೆ.
ನಿಯಮಗಳನ್ನು ಪಾಲಿಸುತ್ತಲೇ ಕರೋನಾ ವಿರುದ್ದ ಹೋರಾಡುತ್ತೇವೆ. ಮುಂದೆಯೂ ಸಾಗುತ್ತೇವೆ.
ಕರೊನಾ ವಿರುದ್ದ ಹೋರಾಡುತ್ತಾ ಜಗತ್ತು 4 ತಿಂಗಳು ಕಳೆದಿದೆ.
3 ಲಕ್ಷ ಜನ ಕರೋನಾದಿಂದ ಜಗತ್ತಿನಲ್ಲಿ ಸಾವನ್ನಪ್ಪಿದ್ದಾರೆ.
ಒಂದು ವೈರಸ್ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.
ಜಗತ್ತಿನಾದ್ಯಂತ ಸಂಕಟ ಕಂಡುಬಂದಿದೆ. ವಿಶ್ವದ ಜನತೆ ಜೀವ ಉಳಿಸಿಕೊಳ್ಳಲು ಪರದಾಡುತ್ತಿದೆ.
ಇಂಥ ಸಂಕಟವನ್ನು ನಾವು ಯಾರೂ ಕಂಡಿಲ್ಲ, ಕೇಳಿಲ್ಲ. ಇದು ಮಾನವ ಕುಲಕ್ಕೆ ಖಂಡಿತಾ ಊಹೆಗೂ ಮೀರಿದ್ದು
ಕರೋನಾ ವಿರುದ್ದದ ಹೋರಾಟದಲ್ಲಿ ನಾವು ಎಂದು ಛಲ ಕಳೆದುಕೊಳ್ಳಬಾರದು.
ಕರೋನಾದಿಂದ ಬಚಾವಾಗಿ ಮುಂದಕ್ಕೆ ಹೆಜ್ಜೆಯನ್ನು ಮತ್ತಷ್ಟು ಪ್ರಬಲವಾಗಿ ಇರಿಸಬೇಕಾಗಿದೆ.
ನಮ್ಮ ಸಂಕಲ್ಪ ಮತ್ತಷ್ಟು ಗಟ್ಟಿಯಾಗಬೇಕು.
21 ನೇ ಶತಮಾನ ಭಾರತದ ಶತಮಾನವಾಗಬೇಕು.
ನಮ್ಮ ಕನಸು ಖಂಡಿತಾ ಹೊಣೆಗಾರಿಕೆಯೊಂದಿಗೆ ನನಸಾಗಬೇಕಾಗಿದೆ.
ಕರೋನಾ ನಮಗೆ ಎಲ್ಲವನ್ನೂ ಕಲಿಸಿಕೊಟ್ಟಿದೆ.
ಒಂದು ಒಗ್ಗಟ್ಟಿನ ರಾಷ್ಟ್ರದ ರೂಪದಲ್ಲಿ ಭಾರತ ಮೇಲೆದ್ದು ನಿಲ್ಲಬೇಕಾಗಿದೆ.
ಕರೋನಾ ಪ್ರಾರಂಭವಾದಾಗ ಭಾರತದಲ್ಲಿ ಒಂದೇ ಒಂದು ಪಿಪಿಟಿ ಕಿಟ್ ಇರಲಿಲ್ಲ.
ಈಗ ಭಾರತದಲ್ಲಿ ಪ್ರತಿ ನಿತ್ಯ 2 ಲಕ್ಷ ಪಿಪಿಟಿ, 2 ಲಕ್ಷ ಎನ್.95 ಮಾಸ್ಕ್ ಉತ್ಪಾದನೆಯಾಗುತ್ತಿದೆ.
ಕರೋನಾ ಒದಗಿಸಿಕೊಟ್ಟ ಅವಕಾಶವಿದು.
ಆತ್ಮ ನಿಭ೯ರ ಭಾರತ ಮುಂದಿನ ಭಾರತವಾಗಲಿದೆ.
ಇಡೀ ವಿಶ್ವವೇ ನಮ್ಮ ಆತ್ಮ ಎಂಬುದೇ ಭಾರತದ ವ್ಯಾಖ್ಯಾನ.
ಜಗತ್ತೇ ಭಾರತದ ನಿಣ೯ಯಗಳನ್ನು ಅನುಸರಿಸುವಂತಾಗಿದೆ.
ಸುಖಿ ಸಮೖದ್ದ ವಿಶ್ವದ ಚಿಂತನೆ ನಮ್ಮೆಲ್ಲರದ್ದಾಗಿರಲಿ.
ವಿಶ್ವಕಲ್ಯಾಣದ ಚಿಂತನೆಯೇ ಭಾರತದ್ದು.
ಕಛ್ ಭೂಕಂಪದಂಥ ದುರಂತ ನೋಡಿದ್ದೇವೆ.
ಕಛ್ ಮತ್ತೆ ಮೇಲೇಳುತ್ತೆ ಎಂದು ಆಗ ಯಾರೂ ಊಹಿಸಲಿಲ್ಲ.
ಇದುವೇ ಭಾರತೀಯರ ಸಂಕಲ್ಪ ಶಕ್ಕಿ. ಯಾವುದೂ ಅಸಾಧ್ಯವಲ್ಲ.
ಭಾರತ 5 ಆಧಾರ ಸ್ಥಂಭಗಳ ಮೇಲೆ ನಿಂತಿದೆ.
ಮೂಲಸೌಕಯ೯,ಆಥಿ೯ಕತೆ, ವ್ಯವಸ್ಥೆಯ ಜಾಲ, ತಾಂತ್ರಿಕತೆಯ ಆಧಾರ, ದೇಶದ ಉತ್ಪನ್ನಗಳಿಗೆ ಬೇಡಿಕೆ.
ಇವುಗಳ ಆಧಾರದ ಮೇಲೆ ನಾವು ಭಾರತೀಯರು ಮತ್ತೆ ಮೇಲೇಳಬೇಕಾಗಿದೆ.
ರೈತರ ಶ್ರಮದ ಬೆವರಿಗೆ ತಕ್ಕ ಫಲ ದೊರಕಬೇಕಾಗಿದೆ.
#NEWS #UPDATES

Social Plugin