ಬಾಗಲಕೋಟೆ ಜಿಲ್ಲೆ
ಕಡು ಬಡವರಿಗೆ 50 ಸಾವಿರ ಕಿಟ್  ವಿತರಿಸಿ ಜನಸೇವೆಯೇ ಜನಾರ್ದನ ಸೇವೆ ಜನ ಸೇವೆಗೆ ಟೊಂಕ ಕಟ್ಟಿ ನಿಂತ::  ಡಾ ನಾಡಗೌಡಪಾಟೀಲ

 ಕೋರೊನ ಎಂಬ ಮಹಾಮಾರಿ ವಿಶ್ವವನ್ನೇ ತಲ್ಲನ ಗೊಳಿಸಿದೆ ಜಗತ್ತಿನ ಜನರೆಲ್ಲ ಆಂತಕದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಭಾರತ ದೇಶದ ಪ್ರದಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರ ಆದೇಶದಂತೆ ಮಾರ್ಚ್ 24 ರಿಂದ ಮೇ 3 ರವರೆಗೆ   ಭಾರತ ದೇಶ ಸಂಪೂರ್ಣ ಸ್ತಬ್ಧ ವಾಗಿದೆ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲರ ಕರ್ತವ್ಯ ವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕೋರೊನ ರೋಗದ ವಿರುದ್ಧ ಹೋರಾಟ ನಡೆಸಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗಾಗಿ 50,000 ಸಾವಿರ ದಿನಸಿ ಕಿಟ್ಟನ್ನು  ನೀಡಿದ ರಬಕವಿ ನೇತ್ರತಜ್ಞ ಡಾ. ಪದ್ಮಜೀತ ನಾಡಗೌಡ ಪಾಟೀಲರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಕಾಂಗ್ರೆಸ್ ಮುಖಂಡ ಶಂಕರ ಸೊರಗಾವಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ  ರಬಕವಿಯ ಶಿವಶಿಂಪಿ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ.
ರಬಕವಿಯ ನೇತ್ರತಜ್ಞ ಡಾ. ಪದ್ಮ ಜೀತ ನಾಡಗೌಡಪಾಟೀಲ ತಂಡದೊಂದಿಗೆ ತೇರದಾಳ  ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗಾಗಿ 50,000  ದಿನಸಿ ಕಿಟ ವಿತರಿಸಿದ ಬಗ್ಗೆ ಮಾಹಿತಿ ನೀಡಿದರು. 

 ಹಿರಿಯರು ಮತ್ತು ಯುವಕರು ಕೂಡಿಕೊಂಡು ರಬಕವಿ ಬನಹಟ್ಟಿ. ಹೊಸೂರ. ರಾಮಪೂರ. ತೇರದಾಳ.  ಮಹಾಲಿಂಗಪೂರ. ನಗರದ ಎಲ್ಲ ವಾರ್ಡುಗಳಲ್ಲಿ ಮತ್ತು ಆಟೋ ಚಾಲಕರು ಸೇರಿದಂತೆ ಮತ್ತು  ನಿರ್ಗತಿಕ ಮತ್ತು ಬಡ ಕುಟುಂಬಗಳಿಗೆ ದಿನಸಿ ಮತ್ತು ಆಹಾರ ಕೀಟಗಳನ್ನು ಪೂರೈಸಿ ನನ್ನ ಅಳಿಲು ಸೇವೆಯ ಮತ್ತು   ನಿಸ್ವಾರ್ಥ ಸೇವೆ ಮಾಡಿದ್ದೇನೆಂದು ಡಾ. ಪದ್ಮಜೀತ  ನಾಡಗೌಡಪಾಟೀಲ ಹೇಳಿದರು.

ತೇರದಾಳ ವಿಧಾನಸಭಾ  ಕ್ಷೇತ್ರದಲ್ಲಿರುವ ಸರ್ಕಾರಿ ಅಧಿಕಾರಿಗಳಿಗೆ 1000 ಕೋವಿಡ ಎನ್ 95  ಮಾಸ್ಕ್ ಗಳನ್ನು ನೀಡಿ  ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು. ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಆಹಾರದ ಕೀಟಗಳನ್ನು ವಿತರಿಸಿದ್ದಾರೆ.
ಅಲ್ಲದೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ ವಿತರಿಸಿ ಕಡ್ಡಾಯವಾಗಿ ಮಾಸ್ಕ ಧರಿಸಲು ಪ್ರೀತಿಯಿಂದ ಮನವಿ ಮಾಡುತ್ತಿದ್ದಾರೆ ನಮಗಾಗಿ ದುಡಿಯುವ ಎಲ್ಲ ಸಿಬ್ಬಂದಿಗಳ ಸೇವೆ ಮಾಡುವುದು ನಮ್ಮ ಗುರಿ ಎಂದು ಈ ಎಲ್ಲಯುವ  ಶಕ್ತಿಯನ್ನು  ಕೂಡಿಸಿಕೊಂಡು ಜನಸೇವೆಗೆ ರಬಕವಿಯ ನೇತ್ರತಜ್ಞರು ಡಾ ಪದ್ಮ ಜೀತ ನಾಡಗೌಡಪಾಟೀಲ ಜನಸೇವೆ  ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ನೀಲಕಂಠ ಮುತ್ತುರ ಹೇಳಿದರು.


ನೇಕಾರರನ್ನು ಕಡೆಗಣಿಸದೇ ಪ್ರತಿಯೊಬ್ಬ ನೇಕಾರರಿಗೂ 5000 ಹಣ ನೀಡಬೇಕೆಂದು ನೇಕಾರರ ಮುಖಂಡ ಶಂಕರ ಸೊರಗಾವಿ ಒತ್ತಾಯ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೇಕಾರರಿಗೆ ಕೇವಲ ಎರಡು ಸಾವಿರ ಹಣವನ್ನು ನೀಡಲು ತೀರ್ಮಾನಿಸಿದ್ದಾರೆ ಇದು ಖಂಡನೀಯ ವಿಷಯ. 

ಬೇರೆ ಕಾರ್ಮಿಕರಿಗೆ 5000 ಹಣವನ್ನು ನೀಡಲು ತೀರ್ಮಾನಿಸಿದ್ದಿರಿ. ಅದರಂತೆಯೆ ನಮ್ಮ  ನೇಕಾರರಿಗೂ  5000 ಸಾವಿರ ಹಣವನ್ನು  ನೀಡಬೇಕೆಂದು ಒತ್ತಾಯಿಸಿದರು.

ಮಹಾಮಾರಿ ಕೊರೊನಾದಿಂದ ನಮ್ಮ ನೇಕಾರರ ಬದುಕು ಚಿಂತಾಜನಕವಾಗಿದೆ. ಈ ಕಷ್ಟದಿಂದ ನಮ್ಮ ನೇಕಾರರನ್ನು ಪಾರು ಮಾಡಿ ಅವರ ಬದುಕಿಗೆ  ಸರ್ಕಾರ ಆಸರೆ ನೀಡಿ ಬದುಕಿಸಬೇಕೆಂದು  ಒತ್ತಾಯಿಸಿದರು.

 ಇದೇ ಸಂದರ್ಭದಲ್ಲಿ  ಕಾಂಗ್ರೆಸ್ ಪಕ್ಷದ ಮುಖಂಡರಾದ ಚಿದಾನಂದ ಗಾಳಿ.ಸಂಜಯ ಅಮ್ಮನಿಗೆಮಠ.ಸಂಜಯ ಜೋತಾವರ. ರಿಯಾಜ್ ಪಣಿಬಂದ. ಕುಮಾರ್ ಬಿಳ್ಳೂರ.ಚಿದಾನಂದ ಪಟ್ಟಣಶೆಟ್ಟಿ.ಚೇತನ ಕಲಾಲ. ಮಾಳು ಹಿಪ್ಪರಗಿ. ಅರವಿಂದ ಮನಿಕೇರಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ