ಬನಹಟ್ಟಿಯಿಂದ ರಾಜಸ್ಥಾನಕ್ಕೆ ತೆರಳಿದ 27 ಜನ ಕೂಲಿ ಕಾರ್ಮಿಕರು ಹಾಗು ವ್ಯಾಪಾರಿಗಳು
ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ ಕೂಲಿ ಕಾರ್ಮಿಕರು
ರಬಕವಿ-ಬನಹಟ್ಟಿ,ಮೇ12: ತಾಲೂಕಿನಾದ್ಯಂತ ಬಟ್ಟೆ, ಕಿರಾಣಿ, ಅಟೋಮೋಬೈಲ್ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ಹೊರೆ ನಿಭಾಯಿಸುತ್ತಿದ್ದ ಒಟ್ಟು 27 ಕೂಲಿ ಕಾರ್ಮಿಕರನ್ನು ತಾಲೂಕಾಡಳಿತ ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಅವರ ಸ್ವಂತ ಗ್ರಾಮಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು. ಸಾರಿಗೆ ಸಂಸ್ಥೆ ಮೂಲಕ ಸುಮಾರು 1500 ಕಿ.ಮೀ.ನಷ್ಟು ದೂರ 30 ಗಂಟೆಗಳ ಕಾಲ ಬಸ್ ಪ್ರಯಾಣ ಬೆಳೆಸಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ಒಂದೇ ಬಸ್‍ನಲ್ಲಿ 27 ಜನರು ಪ್ರಯಾಣ ಬೆಳೆಸಿದರು.

Social Plugin