ಗುಜರಾತ್‍ನಿಂದ ಆಗಮಿಸಿ ಬನಹಟ್ಟಿಯ ಕ್ವಾರಂಟೈನ್‍ಲ್ಲಿದ್ದ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಶಾಲೆ ಆವರಣ ಸೇರಿ ಸುತ್ತಲಿನ ಪ್ರದೇಶವನ್ನು ರಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛತೆಗೊಳಿಸುತ್ತಿರುವದು.

ಬನಹಟ್ಟಿ: ಮೊದಲ ಪಾಸಿಟಿವ್‍ಗೆ ಮೂವರು ಸ್ಥಳೀಯರ ಕ್ವಾರಂಟೈನ್
ರಬಕವಿ-ಬನಹಟ್ಟಿ,ಮೇ12: ಗುಜರಾತ್‍ನ ಅಹಮದಾಬಾದ್‍ನಿಂದ ಆಗಮಿಸಿದ್ದ 12 ಜನ ತಬ್ಲಿಘಿಗಳನ್ನು ರಬಕವಿ-ಬನಹಟ್ಟಿ ತಾಲೂಕಾಡಳಿತ ಕ್ವಾರಂಟೈನ್ ಮಾಡುವ ಸಂದರ್ಭ ಪಟ್ಟಣದ ಮೂವರು ಇವರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಅವರನ್ನೂ ಕ್ವಾರಂಟೈನ್ ಮಾಡಲಾಗಿದೆ. 
ನಿರ್ಲಕ್ಷ್ಯ ಹಾಗು ಸಂಚಾರ ಸಂದರ್ಭ ಅವರೊಂದಿಗೇ ಕ್ವಾರಂಟೈನ್ ಮಾಡುವ ಪ್ರದೇಶದವರೆಗೆ ಸಂಚರಿಸಿದ್ದ ಕಾರಣ ಅವರ ಮೇಲೂ ತಾಲೂಕಾಡಳಿತ ನಿಗಾ ವಹಿಸಿದ್ದು 21 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿಡಲಾಗಿದೆ.
ರಸಾಯನಿಕ ದ್ರಾವಣ ಸಿಂಪಡಣೆ: ಬನಹಟ್ಟಿಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಗುಜರಾತ್‍ನಿಂದ ಆಗಮಿಸಿದ್ದ 12 ಜನರಲ್ಲಿನ ಓರ್ವನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ಲಕ್ಷ್ಮೀ ನಗರ, ಬಸ್ ನಿಲ್ದಾಣ ಬಳಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ರಸಾಯನಿಕ ದ್ರಾವಣ ಸಂಪಡಣೆ ಕಾರ್ಯವು ಮಂಗಳವಾರ ನಡೆಯಿತು.