ತೇರದಾಳ: ಪಟ್ಟಣದ ಸಮೀಪದಲ್ಲಿರುವ ಹಳಿಂಗಳಿ ಗ್ರಾಮದಲ್ಲಿ ಕೋವಿಡ -19 ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಕೋರೋಣ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯವರು, ಅಂಗನವಾಡಿ ಸಹಾಯಕರು, ಪಂಚಾಯತಿ ಅಧಿಕಾರಿ ಸಿಬ್ಬಂದಿಯವರು, ಬೀಟ ಪೊಲೀಸ್ ಸಿಬ್ಬಂದಿಯವರು, ಪಂಚಾಯತಿ ಪೌರ ಸಿಬ್ಬಂದಿಯವರಿಗೆ ಮತ್ತು ಪತ್ರಕರ್ತರಿಗೆ ಹಳಿಂಗಳಿ ಗ್ರಾಮದ ಗೆಳೆಯರ ಬಳಗದ ಸದಸ್ಯರಾದ ಶೇಖರ್ ನಡುವಿನಕೇರಿ (ಹೆಸ್ಕಾಂ ಸೀನಿಯರ್ ಅಸಿಸ್ಟೆಂಟ್ ಜಮಖಂಡಿ), ಯಮನಪ್ಪ ಹುಲಗಬಾಳಿ (ಮಾಜಿ ಯೋಧರು), ನವೀನ್ ಮದಲಮಟ್ಟಿ (ಆಹಾರ ಇಲಾಖೆ ಸಿಬ್ಬಂದಿ), ಪ್ರಕಾಶ ಅರವಡಿ, ಮಹಾವೀರ ಮದನಮಟ್ಟಿ, ಶಿವಾನಂದ ಮದನಮಟ್ಟಿ, ಮುತ್ತಪ್ಪ ಕಾಂಬಳೆ, ದಯಾನಂದ ಕಾಂಬಳೆ ಇವರು ಸುಮಾರು 36ಮಾಸ್ಕ್ ಮತ್ತು ತಂಪು ಕುಡಿಯುವ ನೀರಿನ ಕ್ಯಾನ್ ಗಳನ್ನು ಉಚಿತವಾಗಿ ವಿತರಣೆ ಮಾಡಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ಹಳಿಂಗಳಿ ಗ್ರಾಮದಲ್ಲಿ ನಿರಂತರವಾಗಿ ತಮ್ಮ ಜೀವವನ್ನು ಲೆಕ್ಕಿಸದೆ ಸದಾ ಕಾರ್ಯಪ್ರವೃತ್ತರಾಗಿರುವ ಈ ಮೇಲಿನ ಎಲ್ಲ ಇಲಾಖೆಗಳ ಸಿಬ್ಬಂದಿಗಳಿಗೆ, ನೆರೆದ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಸಾಲಟ್ಟಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯರಾದ ಶ್ರೀಮತಿ ಲಲಿತಾ ರಾಜು ನಂದೆಪ್ಪನ್ನವರ ಮತ್ತು ಇನ್ನೂ ಅನೇಕರು ಉಪಸ್ಥಿತರಿದ್ದರು.

Social Plugin