ಲಿಂಗೈಕ್ಯ .ಶ್ರೀ ಸ.ಸ. ಕಾಡಪ್ಪ ಮಹಾರಾಜರು  ( ಹೊಸೂರು ) ಇವರು 14-05-2020 ಗುರುವಾರ  ಸಾಯಂಕಾಲ 7ಘಂಟೆಗೆ ಮಹಾಲಿಂಗಪುರದ ಆಸ್ಪತ್ರೆಯಲ್ಲಿ ಹೃದಯಾಗಾತದಿಂದ ನಿಧನರಾಗಿದ್ದಾರೆ.ಇವರಿಗೆ ಸುಮಾರು 80ವರ್ಷ ವಯಸ್ಸಾಗಿದ್ದವು.
ಇವರ ಕೈಯಲ್ಲಿ ಇರುವ ಪಾದರಕ್ಷೆ ಶ್ರೀ ಸದ್ಗುರು ಮಾಧವಾನಂದ ಪ್ರಭುಜೀಯವರದ್ದು...

             ಲಿಂಗೈಕ್ಯ.ಶ್ರೀ ಸ.ಸ. ಕಾಡಪ್ಪ ಮಹಾರಾಜರು ಶ್ರೀ ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ "ಶ್ರೀ ಸದ್ಗುರು ಮಾಧವಾನಂದ ಪ್ರಭುಜಿ" ಯವರಿಂದ, ತಮ್ಮ 35ನೇ ವಯಸ್ಸಿನಲ್ಲೇ  ನಾಮೋಪದೇಶ ಪಡೆದು 1972ರಲ್ಲಿ ಸದ್ಗುರು ಮಾಧವಾನಂದ ಪ್ರಭುಗಳ ಕರೆಯ ಮೇರೆಗೆ  "ಶ್ರೀ ಸ. ಸ. ಗುರುಪುತ್ರಪ್ಪಮಹಾರಾಜರು, ಶ್ರೀ ಸ. ಸ. ಪ್ರಭುಜಿ ಮಹಾರಾಜರು, ಶ್ರೀ  ಸಿದ್ದರಾಮಗುರೂಜಿ ಹಾಗೂ ಇನ್ನೂ ಅನೇಕ ಹಿರಿಯರ ಜೊತೆ  ಸರ್ವೋದಯ ಪಾದಯಾತ್ರೆಯಲ್ಲಿ  ಇವರು ಪಾಲ್ಗೊಂಡಿದ್ದರು.  ಸುಮಾರು 8 ವರ್ಷಗಳ ಕಾಲ ಭಾರತದೇಶದುದ್ದಗಲಕ್ಕೂ  ವಿನೋಭಾಜಿಯವರ ಸರ್ವೋದಯ ತತ್ವ, ಗ್ರಾಮದಾನ, ಗ್ರಾಮಸ್ವರಾಜ್ಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಪಾದಯಾತ್ರೆಯಲ್ಲಿ ಇವರು ಮಹಾರಾಜರ ಪ್ರವಚನನಕ್ಕೂ ಮುಂಚೆ "ಗಿಮಕವಿ"ಯ ಗೀಗಿಪದಗಳನ್ನು ಸುಮಾರು ಒಂದು ಘಂಟೆಗಗಳ ಕಾಲ ಹಾಡುತ್ತಿದ್ದ ಕೀರ್ತಿ ಇವರದು. ನಂತರದ ದಿನಗಳಲ್ಲಿ ಎಲ್ಲೇ ಸಂಪ್ರದಾಯದ ಸಪ್ತಾಹಗಳು ನಡೆದರೇ ಅಲ್ಲಿ ಇವರ ಗೀಗಿಪದಗಳು ಕಾಯಂ ಆಗಿರುತ್ತಿದ್ದವು. ಹಲವು ವರ್ಷಗಳಿಂದ ಸಕ್ಕರೆ ಕಾಯಿಲೆ ಇದ್ದರು "ಸದ್ಗುರು ಮಾಧವಾನಂದ ಪ್ರಭುಗಳ ಆಶೀರ್ವಾದ ನನಗಿದೆ.ನನಗೆ ಅವರೇ ಕಾಯುತ್ತಾರೆ ನನಗೆ ಏನು ಆಗಲ್ಲ" ಎಂದು ಸಿಹಿ ತಿಂಡಿ ತಿನ್ನುತ್ತಿದ್ದರು.ಎಲ್ಲರ ಜೊತೆ ತುಂಬಾ ಪ್ರೀತಿಯ ಒಡನಾಟ ಇವರದು. ಇವರ ನಿಧನದಿಂದ ಇಂಚಗೇರಿ ಸಂಪ್ರದಾಯದ ಸದ್ಗುರುಗಳಾದ ಶ್ರೀ ಸ. ಸ. ರೇವಣಸಿದ್ದ ಮಹಾರಾಜರು, ಶ್ರೀ ಸ. ಸ. ಪ್ರಭುಜಿ ಮಹಾರಾಜರು, ಡಾ. ಸ. ಸ. ಎ. ಸಿ. ವಾಲಿ ಮಹಾರಾಜರು ( ಸೀತಾಗಿರಿ ),  ಶ್ರೀ ಯಲ್ಲಪ್ಪ ಮಹಾರಾಜರು ( ಬನಹಟ್ಟಿ ) ಹಾಗೂ ಸಮಸ್ತ  ಸಂಪ್ರದಾಯದ  ಭಕ್ತರು ಕಂಬನಿ ಮಿಡಿದು ಸಂತಾಪ ವ್ಯಕ್ತಪಡಿಸಿದ್ದಾರೇ. ಮೃತರ ಆತ್ಮಕ್ಕೆ  ಚಿರಶಾಂತಿಸಿಗಲಿ. ಅವರ ಕುಟುಂಬಕ್ಕೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿ ಸದ್ಗುರುಗಳು ನೀಡಲಿ.  ಜೈ ಜಗತ್....