-ಬನಹಟ್ಟಿ ನಗರಸಭೆಯಲ್ಲಿ ಬಸವ ಜಯಂತಿ ಆಚರಣೆ ಸಂದರ್ಭ ಪೌರ ಕಾರ್ಮಿಕರಿಗೆ ತಂಪು ಪಾನೀಯ ವಿತರಿಸಲಾಯಿತು.
ಬಸವ ತತ್ವ ಅಳವಡಿಸಿಕೊಂಡು ಸಂಪನ್ನಗೊಳಿಸೋಣ
ರಬಕವಿ-ಬನಹಟ್ಟಿ,ಏ26: ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದಿನಿಸಯ್ಯಾ, ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದಿನಿಸಯ್ಯಾ.
ಬಸವಣ್ಣನವರ ಈ ವಚನ ಹಿಂದೆಂದಿಗಿಂತಲೂ ಈಗ ಪ್ರಸ್ತುವೆನಿಸುತ್ತದೆ ಮಹಾಮನೆಯೇ ಆಗಿರುವ ಈ ಜಗದಲ್ಲಿ ಎಲ್ಲರೂ ಮನೆಯ ಮಕ್ಕಳೆ, ಯಾರೂ ಹೆಚ್ಚು ಕಡಿಮೆಯಲ್ಲ. ಪ್ರೀತಿ ತೋರಿದರೆ ಬರಡು ನೆಲವೂ ಬಂಗಾರವಾಗುತ್ತದೆ. ಬೇಕಾಗಿರುವದು ಹಿಡಿ ಪ್ರೀತಿ ಜೊತೆಗೆ ನಮ್ಮವರೆನ್ನುವ ಭಾವವೆಂದು ಪೌರಾಯುಕ್ತ ಶ್ರೀನಿವಾಸ ಜಾಧವ ಹೇಳಿದರು.
ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ವಿಶ್ವಗುರು ಬಸವಣ್ಣನವರ 887 ನೇ ಜಯಂತಿ ಆಚರಣೆ ಸಂದರ್ಭ ಪಾಲ್ಗೊಂಡು ಮಾತನಾಡಿದ ಅವರು, ಸಮಾನತೆಯ ಹರಿಕಾರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದರು.
ಇದೇ ಸಂದರ್ಭ ಬಸವ ಸಮಿತಿಯ ಚಂದ್ರು ಕುಲಗೋಡ ನೂರಾರು ಪೌರ ಕಾರ್ಮಿಕರಿಗೆ ತಂಪು ಪಾನೀಯ ವಿತರಿಸಿದರು. ಶಶಿಧರ ಕುಳ್ಳಿ, ಪ್ರಕಾಶ ಪರಕಾಳೆ, ಶರಣಪ್ಪನವರ ಸೇರಿದಂತೆ ಅನೇಕರಿದ್ದರು.

Social Plugin