ಕಷ್ಟಪಟ್ಟು ಕೂಡಿಟ್ಟ ಹಣ ಕೊರೊನಾ ನಿಧಿಗೆ ದೇಣಿಗೆ ನೀಡಿದ ಮಕ್ಕಳು
ರಬಕವಿ-ಬನಹಟ್ಟಿ,ಏ26: ಕೊರೊನಾ ವಿರುದ್ಧದ ಸಮರಕ್ಕೆ ವಿಶ್ವಾದ್ಯಾಂತ ಕೈಗಾರಕೋದ್ಮಮಿಗಳು ಕೋಟಿಗಟ್ಟಲೆ ಹಣ ದೇಣಿಗೆ ಕೊಡುತ್ತಿರುವದು ಸುದ್ದಿಯಾಗುತ್ತಿದೆ ಆದೆ ಇಲ್ಲಿನ ಅಶೋಕ ಕಾಲನಿಯ ನಿವಾಸಿ ಪರೀಟ ಕುಟುಂಬದ 4 ವರ್ಷದ ಪ್ರೀತಂ, 6 ವರ್ಷದ ಪ್ರಜ್ವಲ್ ಹಾಗು 8 ವರ್ಷದ ಅಶೋಕ ಎಂಬ ಮೂವರು ಮಕ್ಕಳು ಕಷ್ಟಪಟ್ಟು ಪ್ಲಾಸ್ಟಿಕ್ ಕುಳ್ಳಿಯೊಂದರಲ್ಲಿ ಉಳಿತಾಯ ಮಾಡಿದ್ದ 1210 ರೂಪಾಯಿಗಳನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಥಳೀಯ ಶಾಸಕ ಸಿದ್ದು ಸವದಿಯವರ ನಿವಾಸಕ್ಕೆ ತೆರಳಿ ಪತ್ರ ಬರೆದು ನಾವು 1210 ರೂಪಾಯಿ ಉಳಿತಾಯ ಮಾಡಿದ್ದು ರಾಜ್ಯದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ನಿಮಗೆ ಅದನ್ನು ದೇಣಿಗೆಯಾಗಿ ನಿಡಲುತ್ತಿರುವದಾಗಿ ಹೇಳಿದ್ದಾರೆ. ಏಕೆ ಈ ದೇಣಿಗೆ ನೀಡಿದ್ದು ಎಂಬ ಪ್ರಶ್ನೆಗೆ ಉತ್ತಿರಿಸಿದ ಮಕ್ಕಳು ಲಾಕ್‍ಡೌನ್‍ನಿಂದಾಗಿ ಸಾವಿರಾರು ಮಂದಿ ವಲಸೆ ಕಾರ್ಮಿಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನೆಗಳಿಗೆ ಹೋಗಲು ಪರದಾಡುತ್ತಿದ್ದಾರೆ ಆಹಾರವೂ ಇಲ್ಲದೇ ಅಲೆದಾಡುತ್ತಿರುವ ಜನರಿಗೆ ಕೈಲಾದ ನೆರವು ನೀಡುವದಕ್ಕಾಗಿ ಈ ಸಹಾಯ ಮಾಡುತ್ತಿರುವದಾಗಿ ತಿಳಿಸಿದರು.

Social Plugin