ತೇರದಾಳ : ಪಟ್ಟಣದ ಪೋಲಿಸ್ ಠಾಣೆ ಸಿಬ್ಬಂದಿ ಹಾಗೂ ಪುರಸಭೆ ಪೌರ ಕಾರ್ಮಿಕರಿಗೆ ಮತ್ತು ರಜೆಯ ಮೇಲೆ ಊರಿಗೆ ಬಂದು ಪಟ್ಟಣದಲ್ಲಿನ ಜನರ ಕೊರೊನಾ ವೈರಸ್ ತಡೆಗಟ್ಟಲು ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ಉತ್ಕøಷ್ಟ ಮಟ್ಟದ ಎನ್-95 ಮಾಸ್ಕ್ ಹಾಗೂ ಕೈಗವಸವನ್ನು ರಬಕವಿಯ ಖ್ಯಾತ ನೇತ್ರ ತಜ್ಞ ಡಾ. ಪದ್ಮಜೀತ ನಾಡಗೌಡ ಪಾಟೀಲ ವಿತರಿಸಿದರು.
ಪಟ್ಟಣದ ಸಾರ್ವಜನಿಕರ ರಕ್ಷಣೆಗಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ಪೋಲಿಸ್ ಇಲಾಖೆ ಸಿಬ್ಬಂದಿ ಹಾಗೂ ಪಟ್ಟಣದ ಸ್ವಚ್ಚತೆಯಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ತೊಡಗಿರುತ್ತಾರೆ. ಮತ್ತು ರಜೆಯ ಮೇಲೆ ಊರಿಗೆ ಬಂದು ಪಟ್ಟಣದಲ್ಲಿನ ಜನರ ಕೊರೊನಾ ವೈರಸ್ ತಡೆಗಟ್ಟಲು ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಯೋಧರ ಕಾರ್ಯವನ್ನು ಕಂಡು ರಬಕವಿಯ ಖ್ಯಾತ ನೇತ್ರ ತಜ್ಞ ಡಾ. ಪದ್ಮಜೀತ ನಾಡಗೌಡ ಪಾಟೀಲ ಇವರು ಉತ್ತಮ ಗುಣಮಟ್ಟದ ಎನ್-95ಮಾಸ್ಕ್ ಹಾಗೂ ಕೈಗವಸವನ್ನು ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದವರು ಉತ್ತಮ ಗುಣಮಟ್ಟದ ಮಾಸ್ಕ್ ಎನ್-95 ಸಮೀಪದಲ್ಲಿ ಎಲ್ಲಿಯೂ ಸಿಗದೇ ಕಾರಣ ಬೆಂಗಳೂರಿನಿಂದ ತರಿಸಲು ಬೇಡಿಕೆಯನ್ನು ಕಳುಹಿಸಿದ ನಂತರ ರಾಜ್ಯದಲ್ಲಿ ಲಾಕ್‍ಡೌನ್‍ದಿಂದಾಗಿ ವಾಹನ ಸಂಚಾರ ಎಲ್ಲವೂ ಬಂದ್ ಆಗಿದ್ದವು. ಸುಮಾರ ಒಂದೂವರೆ ಲಕ್ಷ ರೂ.ಗಳ ಮಾಸ್ಕಸಗಳಿಗೆ ಬೇಡಿಕೆ ಕೊಟ್ಟು ಹದಿನೈದು ದಿನಗಳಾದರೂ ಮಾಸ್ಕ್ ಬರಲೇ ಇಲ್ಲ. ಆದ್ದರಿಂದ ಅಂಚೆ ಸಹಾಯದಿಂದ ಮಾಸ್ಕ್‍ಗಳು ಹಾಗೂ ಕೈಗವಸ ತರಿಸಿ ಪೋಲಿಸ್ ಠಾಣೆ ಹಾಗೂ ಪೌರ ಕಾರ್ಮಿಕರಿಗೆ ಮತ್ತು ರಜೆಯ ಮೇಲೆ ಊರಿಗೆ ಬಂದು ಪಟ್ಟಣದಲ್ಲಿನ ಲಾಕ್‍ಡೌನ್ ಹಿನ್ನಲೇ ಕೊರೊನಾ ವೈರಸ್‍ನಿಂದ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್‍ಐ ವಿಜಯ ಕಾಂಬಳೆ, ಪ್ರವೀಣ ನಾಡಗೌಡ, ನಿಲೇಶ ದೇಸಾಯಿ, ಸುರೇಶ ಕಬಾಡಗಿ, ಶಿವಪ್ಪ ಖವಾಸಿ, ಆದಿನಾಥ ಸಪ್ತಸಾಗರ, ಶಂಕರ ಸೊರಗಾಂವಿ, ರಾಜು ಹೊಸಮನಿ ಹಾಗೂ ಪೋಲಿಸ್ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿದಂತೆ ಇನ್ನಿತರರು ಇದ್ದರು.

Social Plugin