
ರಬಕವಿ-ಬನಹಟ್ಟಿ,ಏ21: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಶಾಸಕ ಸಿದ್ದು ಸವದಿ ನಗರ ಹಾಗು ಗ್ರಾಮ ಪ್ರದಕ್ಷಿಣೆ ಹಾಕುವ ಸಂದರ್ಭ ಕೆಲವರು ಮುಖಕ್ಕೆ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದ ಜನರನ್ನು ತಡೆದು, ಮನೆಯಿಂದ ಹೊರಬರುವಾಗ ಮಾಸ್ಕ್ ಹಾಕೊಂಡ್ ತಿರಗಾಡ್ರೀ.. ಎಂದು ಬೇಸರಗೊಂಡು ಮಾಸ್ಕ್ ವಿತರಣೆ ಮಾಡಿದ ಪ್ರಸಂಗ ನಡೆಯಿತು. ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ದಿನಸಿ ಕಿಟ್ ಹಾಗು ಅನೇಕ ಸಾಮಗ್ರಿಗಳನ್ನು ಒದಗಿಸುವ ಸಂದರ್ಭ ಜನತೆ ಫಲಾನುಭವಿಗಳಾಗಿ ಸರದಿಯಲ್ಲಿ ನಿಂತ ಸಂದರ್ಭ ಮಾಸ್ಕ್ ಇಲ್ಲದವರಿಗೆ ಬೇಸರದಿಂದ ಮನವರಿಕೆ ಮಾಡುತ್ತಿರುವದು ಕಂಡು ಬಂದಿತು. ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಸಂಚರಿಸಿ, ಸಾಧ್ಯವಾದಷ್ಟು ಸ್ಯಾನಿಟೈಜರ್ ಬಳಕೆ ಹಾಗು ಮನೆ ಹೋದ ನಂತರ ಸೋಪಿನಿಂದ ಸ್ವಚ್ಛವಾಗಿ ಕೈತೊಳೆದುಕೊಂಡು ನಂತರದ ಕಾಯಕ ಮಾಡಬೇಕೆಂದು ಮನವರಿಕೆ ಮಾಡಿದರು.ಕ್ಷೇತ್ರದ ಜನತೆ ಹಸಿವಿನಿಂದ ತೊಂದರೆ ಅನುಭವಿಸಬಾರದುಕ್ಷೇತ್ರದ ಯಾವುದೆ ವ್ಯಕ್ತಿ ಹಸಿವಿನಿಂದ ತೊಂದರೆ ಅನುಭವಿಸದಂತೆ ನೋಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂಥ ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳು, ನಗರಸಭೆಯ ಸದಸ್ಯರು ಬಡವರ ಸಹಾಯಕ್ಕೆ ನಿಂತಿರುವುದು ಅಭಿಮಾನದ ಸಂಗತಿ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು. ಅವರು ಮಂಗಳವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯ ವತಿಯಿಂದ ಬಡವರಿಗೆ ನೀಡಲಾದ ಆಹಾರ ಕಿಟ್‍ಗಳನ್ನು ವಿತರಣೆ ಮಾಡಿ ಮಾತನಾಡಿದರು. ಕೋವಿಡ್–19 ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಹಗಲಿರುಳು ಪರಿಶ್ರಮ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರೂ ಅಭಿನಂದನಾರ್ಹರು ಎಂದು ಶಾಸಕ ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ಗೋದವಾರೆ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಬಾಲಚಂದ್ರ ಭಕ್ಷಿ ಎರಡು ನೂರು ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಶಾಂತ ಚನಗೊಂಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಗ್ರೇಡ್–2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಆಹಾರ ಇಲಾಖೆಯ ಶಿರಸ್ತೆದಾರ ದತ್ತಾತ್ರೆಯ ದೇಶಪಾಂಡೆ, ಬಸವರಾಜ ತಾಳಿಕೋಟಿ, ಮಲ್ಲಿಕಾರ್ಜುನ ಖವಟಕೊಪ್ಪ, ಅಭಿನಂದನ ಸೋನಾರ, ರಮೇಶ ಮಳ್ಳಿ. ಸುರೇಶ ಅಕ್ಕಿವಾಟ, ಗೌರಿ ಮಿಳ್ಳಿ, ಶಿವಾನಂದ ಬುದ್ನಿ ಸೇರಿದಂತೆ ಅನೇಕರು ಇದ್ದರು.
Social Plugin