ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮ ಸೇರಿದಂತೆ ಕರ್ನಾಟಕ ರಾಜ್ಯಾಧ್ಯಾಂತ ಜಗಜ್ಯೋತಿ ಬಸವಣ್ಣವರ ಜಯಂತಿಯನ್ನು ಆಚರಿಸಲಾಯಿತು.
ಜಮಖಂಡಿ : ಬಸವ ಜಯಂತಿ ನಿಮಿತ್ಯ ನಗರದ ವರ್ತಕ ಗಲ್ಲಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ನಮನ ಮಾಡಿದ ನಂತರ ಪೂಜ್ಯ ಒಲೆಮಠದ ಶ್ರೀಗಳು ಇದೇ ಸಮಯದಲ್ಲಿ ಪೂಜ್ಯರೂ ಕೊರೋನಾ ಜಾಗೃತಿ ಮೂಡಿಸಿ ಮಾಸ್ಕ ವಿತರಣೆ ಮಾಡಿದರು.
ತೇರದಾಳ: ಸಾಮಾಜಿಕ ಸಮಾನತೆಯನ್ನು ಆಚರಣೆಯಲ್ಲಿ ತಂದ ಮಹಾನ್ ಚೇತನ,ಸಮಾಜ ಸುಧಾರಕ, ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಹಾ ಮಾನವತಾವಾದಿ, ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಕೊವಿಡ್-19 ನಿಮಿತ್ತ ಪಟ್ಟಣದಲ್ಲಿ ಇಂದು ದಿನಾಂಕ 26/4/2020ರಂದು ಬಸ್ ನಿಲ್ದಾಣದ ಹತ್ತಿರ ಬಸವೇಶ್ವರ ವೃತ್ತದಲ್ಲಿ ಸರಳವಾಗಿ ಬಸವಣ್ಣವರ ಜಯಂತಿಯನ್ನು ತೇರದಾಳ ಪುರಸಭೆಯ ಸದಸ್ಯರು, ತೇರದಾಳ ತಾಲೂಕಾ ಹೋರಾಟ ಸಮಿತಿಯ ಸದಸ್ಯರು ಆಚರಣೆ ಮಾಡಿದರು. ಅದು ಅಲ್ಲದೆ ಇನ್ನೂ ಹಲವಾರು ಕಡೆ ಅಂದರೆ ವಿಶೇಷ ತಹಶಿಲದಾರರ ಕಛೇರಿಯಲ್ಲಿ ,ಸ್ಥಳೀಯ ಪೊಲೀಸ ಠಾಣೆಯಲ್ಲಿ, ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳದಲ್ಲಿ, ಕಲ್ಲಟ್ಟಿ ಗಲ್ಲಿಯಲ್ಲಿ, ಟಿ.ಎ.ಪಿ.ಸಿ.ಎಂ.ಎಸ್.ನಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
Social Plugin