ಅಡಿಕೆಗೆ ಬಂತು ಬಂಗಾರದ ಬೆಲೆ
ಬಕವಿ-ಬನಹಟ್ಟಿ,ಏ25: ಲಾಕ್‍ಡೌನ್‍ವಾದ ತಿಂಗಳ ನಂತರದ ಪರಿಸ್ಥಿತಿಯಲ್ಲಿ ಯಾವದೇ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಎಲ್ಲೆಡೆ ಅಡಿಕೆ ದೊರಕುತ್ತಿಲ್ಲ ಕಾರಣ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ 400 ರೂ.ಗೆ ಕೆ.ಜಿ. ದೊರಕುತ್ತಿದ್ದ ಅಡಿಕೆ 800 ರೂ.ಗಳವರೆಗೆ ಏರಿಕೆಯಾಗಿರುವದಕ್ಕೆ ಅಡಿಕೆ ಪ್ರಿಯರು ಹೌಹಾರುವಂತಾಗಿದೆ.
ಲಾಕ್‍ಡೌನ್ ಮುರಿಯುತ್ತಿರುವ ಜನತೆ: ಮೇ 3ರವರೆಗೆ ಲಾಕ್‍ಡೌನ್ ಅನ್ವಯವಿದ್ದರೂ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ, ಮಹಾಲಿಂಗಪೂರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಲಾಕ್‍ಡೌನ್ ಮುರಿಯುವಲ್ಲಿ ಜನತೆ ಕಾರಣರಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವದೇ ಕೊರೊನಾ ಪತ್ತೆಯಾಗದ ಹಿನ್ನಲೆಯಲ್ಲಿ ಜನತೆ ನಿರಾತಂಕವಾಗಿ ಸಂಚರಿಸುತ್ತಿರುವದು ಕಂಡು ಬರುತ್ತಿದೆ.
ಆದರೆ ಸುತ್ತಲಿನ 20 ಕಿ.ಮೀ.ದ ಅಂತರಗಳಲ್ಲಿ ಕೊರೊನಾ ರೋಗಿಗಳು ಪತ್ತೆಯಾಗಿರುವ ಹಿನ್ನಲೆ ಯಾವದೇ ಕಾರಣಕ್ಕೂ ಎಚ್ಚರ ವಹಿಸಬೇಕೆಂದು ಸ್ಥಳೀಯ ತಾಲೂಕಾಡಳಿತ, ನಗರಸಭೆ ಹಾಗು ಪೊಲೀಸ್ ಇಲಾಖೆ ಸರದಿಯಂತೆ ಮನವಿ ಮಾಡುತ್ತಿದ್ದರೂ ಜನರು ಮಾತ್ರ ಪಾಲಿಸುತ್ತಿಲ್ಲ.
ಯಾವುದಕ್ಕೂ ಕೇವಲ ಒಂದು ವಾರ ಮಾತ್ರ ಜಾಗರೂಕತೆಯಿಂದ ಲಾಕ್‍ಡೌನ್ ಪಾಲಿಸಿದರೆ ಅಪಾಯಮಟ್ಟವನ್ನು ಮೀರಿ ನಿಲ್ಲಬಹುದು. ನಿರ್ಲಕ್ಷ್ಯ ತೋರಿದಲ್ಲಿ ನಾವೇ ಹೊಣೆಗಾರರೆಂಬುದನ್ನು ಜನತೆ ಅರಿಯಬೇಕಿದೆ.