ಹೆಸರಾಂತ ಗಣಿತ ಶಾಸ್ತ್ರಜ್ಞ ಡಾ. ವೀರಭದ್ರಪ್ಪ ಕುಳ್ಳಿಯವರು ಕೊರೊನಾ ವೈರಸ್ ಬಗ್ಗೆ ತಯಾರಿಸಿದ ಸೂತ್ರವನ್ನು ಸರ್ಕಾರಕ್ಕೆ ತಲುಪಿಸುವಂತೆ ಶಾಸಕ ಸಿದ್ದು ಸವದಿಯವರಿಗೆ ನೀಡಿದರು.
ಕೋವಿಡ್-19 ಸಂಶೋಧನೆ ಬಗ್ಗೆ ಲೇಖನ ತಯಾರಿಸಿದ ಕುಳ್ಳಿ
ರಬಕವಿ-ಬನಹಟ್ಟಿ,ಏ27: ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಗಣಿತ ವಿಭಾಗದ ಮುಖ್ಯಸ್ಥ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಡಾ. ವೀರಭದ್ರಪ್ಪ ಕುಳ್ಳಿಯವರು ಕೋವಿಡ್-19 ವಿಷಯದ ಬಗ್ಗೆ ಸಂಶೋಧನಾ ಲೇಖನವನ್ನು ಗಣಿತದ ಮೂಲಕ ಬಿಡಿಸಲಾಗಿದ್ದು, ಸದ್ಯ ಅಂತರಾಷ್ಟ್ರೀಯ ಜರ್ನಲ್ ಪುಸ್ತಕದಲ್ಲಿ ಪ್ರಕಟಗೊಂಡು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
`ಕೆ-ಬನಹಟ್ಟಿ’ ಇಂಡೈಸಸ್ ಆಫ್ ಕ್ಲೋರೋಕ್ವೀನ್ ಮತ್ತು ಹೈಡ್ರೋಕ್ಸಿ ಕ್ಲೋರೋಕ್ವೀನ್ ವಿಷಯದಡಿ ಕೋವಿಡ್-19 ರೋಗದ ಔಷಧೋಪಚಾರ ಹಾಗು ನಿವಾರಣೆಯ ಬಗ್ಗೆ ಗಣಿತದ ಮೂಲಕ ಸಂಶೋಧನಾ ಸೂತ್ರ ತಯಾರಿಸುವ ಮೂಲಕ ಸೋಮವಾರ ತೇರದಾಳ ಶಾಸಕ ಸಿದ್ದು ಸವದಿ ಹಾಗು ತಹಶೀಲ್ದಾರ ಪ್ರಶಾಂತ ಚನಗೊಂಡರ ನೇತೃತ್ವದಲ್ಲಿ ಸರ್ಕಾರಕ್ಕೆ ವಿಷಯ ಅರ್ಪಿಸಿದರು.
ಕೋವಿಡ್-19 ಬಗ್ಗೆ ಔಷಧಿ ಕಂಡು ಹಿಡಿಯಲು ರಸಾಯನ ಕಂಪೌಂಡಗಳ ಹಲವಾರು ಗುಣಧರ್ಮಗಳನ್ನು ತಿಳಿಯಲು ಗಣಿತ ಸಂಶೋಧನೆಯು ಸಹಾಯಕವಾಗಿರುತ್ತದೆ. ಡಾ. ಕುಳ್ಳಿ 1966 ರಿಂದ ವೈದ್ಯಕೀಯ ವಿಜ್ಞಾನ, ಗಣಿತ ರಸಾಯನ ಶಾಸ್ತ್ರ, ಗ್ರಾಫ್ ಥೆಯರಿ, ಗಣಿತ ಇವುಗಳಲ್ಲಿ ನಿರಂತರ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಇವರು ಈಗಾಗಲೇ 370 ಕ್ಕಿಂತ ಹೆಚ್ಚು ಉಪಯುಕ್ತ ಲೇಖನಗಳನ್ನು ದೇಶ-ವಿದೇಶ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ವಿಶೇಷ.
ಸದ್ಯ ಕೋವಿಡ್-19 ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ಡಾ. ವೀರಭದ್ರಪ್ಪ ಕುಳ್ಳಿಯವರೊಂದಿಗೆ ನುರಿತ ವಿಜ್ಞಾನಿಗಳಿಂದ ಮತ್ತಷ್ಟು ಸಂಶೋಧನೆ ಅವಶ್ಯವಿದೆ.