ಅಕ್ರಮ ಭಟ್ಟಿಗಳಿಗೆ ನೋಟಿಸ್ ಜಾರಿ
ರಬಕವಿ-ಬನಹಟ್ಟಿ,ಏ23:  ಕಳೆದ ದಿ.22 ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ `ಲಾಕ್‍ಡೌನ್‍ಗೆ ಕ್ಯಾರೇ ಎನ್ನದ ಇಟ್ಟಂಗಿ ಭಟ್ಟಿಗಳು’ ಎಂಬ ಶಿರ್ಷೀಕೆಯಡಿ ಪ್ರಕಟಗೊಂಡ ವರದಿಗೆ ಎಚ್ಛೆತ್ತ ಕಂದಾಯ ಇಲಾಖೆಯು ಗುರುವಾರ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ-ಕುಲಹಳ್ಳಿ ಗ್ರಾಮಗಳ ರಸ್ತೆ ಅಕ್ಕಪಕ್ಕದಲ್ಲಿನ ಒಟ್ಟು 13 ಇಟ್ಟಂಗಿ ಭಟ್ಟಿಗಳಿಗೆ ತೆರಳುತ್ತಿದ್ದಂತೆ ಅಲ್ಲಿದ್ದ ನೂರಾರು ಕೆಲಸಗಾರರು ಭಟ್ಟಿಗಳಿಂದ ಪರಾರಿಯಾದ ಘಟನೆ ನಡೆಯಿತು.
ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಭಟ್ಟಿಗಳಿಗೆ ಭೆಟ್ಟಿ ನೀಡಿದ ಸಂದರ್ಭ ಅಲ್ಲಿದ್ದ ಭಟ್ಟಿಗಳ ಮಾಲಿಕರು ಹಾಗು ಕೆಲಸಗಾರರು ಪರಾರಿಯಾದ ಕಾರಣ ಇಲಾಖೆಯಿಂದ ನೋಟೀಸ್ ಜಾರಿ ಮಾಡುವ ಮೂಲಕ ಇಲ್ಲಿರುವ ಎಲ್ಲ ಭಟ್ಟಿಗಳು ಅಕ್ರಮವಾಗಿದ್ದು, ಇವುಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವದರ ಜೊತೆಗೆ ಪ್ರಕರಣ ದಾಖಲಿಸಲಾಗುವದೆಂದು ತಿಳಿಸಿದರು.
ಈ ಸಂದರ್ಭ ಎಎಸ್‍ಐ ಜಿ.ಆಯ್. ಮಠಪತಿ, ನಿಂಗಪ್ಪ ಸಂತಿವೂರ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಅನೇಕ ಕಂದಾಯ ಇಲಾಖೆ ಸಿಬ್ಬಂದಿಗಳಿದ್ದರು.