ಲಾಕ್‍ಡೌನ್ ನಡುವೆಯೂ ಮಾನವೀಯತೆ ಮೆರೆದ ಪೊಲೀಸ್
-ಚಂದ್ರಶೇಖರ ತುಂಗಳ
ರಬಕವಿ-ಬನಹಟ್ಟಿ
ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡಾ ಒಂದಿಲ್ಲ ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿದೆ.
ಲಾಕ್‍ಡೌನ್ ವೇಳೆ ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದ ಬನಹಟ್ಟಿ ಠಾಣೆಯ ಪೇದೆ ಆನಂದ ಕುಂಬಾರ ಎಂಬಾತ ಬಸ್ ನಿಲ್ದಾಣ ಬಳಿಯ ಭಿಕ್ಷುಕನೊಬ್ಬನ ಹತ್ತಿರ ತೆರಳುವ ಸಂದರ್ಭ ಭಿಕ್ಷುಕ ಪೊಲೀಸರನ್ನು ಕಂಡು ಎದ್ದೋ ಬಿದ್ದೋ ಓಡೋಗುವ ಸಂದರ್ಭದಲ್ಲಿದ್ದಾಗ ಆತನನ್ನು ಸಾಮಾಜಿಕ ಅಂತರದೊಂದಿಗೆ ಮತ್ತಿಬ್ಬರ ಸಹಾಯದಿಂದ ತಡೆದು ಅರೆಬೆತ್ತಲೆಯಿದ್ದ ಆತನಿಗೆ ತಾನೊ ಹಾಕಿಕೊಂಡ ಪೊಲೀಸ್ ಸಮವಸ್ತ್ರದ ಮೇಲಿನ ಜ್ಯಾಕೆಟ್‍ನ್ನು ತೆಗೆದು ಆತನಿಗೆ ಹಾಕುವ ಮೂಲಕ ಕೊರೊನಾ ಬಗ್ಗೆ ಅರಿವು ಮೂಡಿಸುವ ಮೂಲಕ ಆತನಿಗೆ ಆಹಾರ ಪೊಟ್ಟಣ ನೀಡಿ ಮಾನವೀಯತೆ ಮೆರೆಯುವಲ್ಲಿ ಕಾರಣರಾಗಿದ್ದಾರೆ. ಇಂತಹ ಎಷ್ಟೋ ಪ್ರಸಂಗಗಳು ಮನಕಲಕುವಂತೆ ಇದ್ದು, ಇಂತಹ ಹಲವಾರು ಪೊಲೀಸರು ತಮ್ಮ ಕುಟುಂಬದಿಂದ ದೂರ ಉಳಿದು ನಿತ್ಯ ಕಾರ್ಯದ ಒತ್ತಡದಲ್ಲಿಯೂ ಮಾನವೀಯತೆ ಮೆರೆಯುತ್ತಿರುವದಕ್ಕೆ ಒಂದು ಸಲಾಂ ಹೇಳಲೇಬೇಕು.