ಹಲ್ಲೆ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಜಿಲ್ಲಾಧಿಕಾರಿ
ರಬಕವಿ-ಬನಹಟ್ಟಿ,ಏ23: ಆರೋಗ್ಯ ಮಾಹಿತಿ ದಾಖಲಾತಿಸಿಕೊಳ್ಳುವ ಸಂದರ್ಭ ಎಲ್ಲರೂ ಸಹಮತ ತೋರುವ ಮೂಲಕ ಆಶಾ ಕಾರ್ಯಕರ್ತೆರು ಸೇರಿದಂತೆ ಸರ್ಕಾರಿ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕಾದದು ಪ್ರತಿಯೊಬ್ಬರ ಜವಾಬ್ದಾರಿ ಈಗಾಗಲೇ ಜಮಖಂಡಿಯಲ್ಲಿ ಕೊರೊನಾ ಸೊಂಕಿತ ಪ್ರದೇಶದಲ್ಲಿ ಮನೆ ಮನೆಗೆ ಭೆಟ್ಟಿ ನೀಡುವ ಸಂದರ್ಭ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಮುಂದಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ತಿಳಿಸಿದರು.
ಗುರುವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಗೆ ಆಗಮಿಸಿ ಮಾತನಾಡಿದ ಅವರು, ಕೊರೊನಾ ವಿಪತ್ತು ನಿರ್ವಹಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವದೆಂದರು. ಪ್ರತಿಯೊಬ್ಬರು ಸಾಮಾಜಿಕ ಅಂತರದಿಂದ ಸರ್ಕಾರದ ಲಾಕ್‍ಡೌನ್ ಪಾಲಿಸಬೇಕು. ಮೇ 3 ರವರೆಗೆ ಸಂಪೂರ್ಣ ಸ್ತಬ್ದಗೊಳ್ಳುವ ಮೂಲಕ ಮನೆಯಿಂದ ಯಾರೂ ಮನೆಯಿಂದ ಹೊರಬರಬೇಡಿ ಎಂದರು.
ಇದೇ ಸಂದರ್ಭ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ ಪ್ರಶಾಂತ ಚನಗೊಂಡ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ, ಪೌರಾಯುಕ್ತ ಶ್ರೀನಿವಾಸ ಜಾಧವ, ವೃತ್ತ ನಿರೀಕ್ಷಕ ಜೆ ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಇದ್ದರು.