ಕೊರೊನಾ ಹೋರಾಟ: 70 ವರ್ಷದ ಅಂಧನಿಂದ 1.25 ಲಕ್ಷ ದೇಣಿಗೆರಬಕವಿ-ಬನಹಟ್ಟಿ,ಏ21: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅನೇಕರು ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸುತ್ತಿದ್ದಾರೆ. ಇಲ್ಲೊಬ್ಬ ಅಂಧ ವ್ಯಕ್ತಿ ಪ್ರಧಾನ ಮಂತ್ರಿಗೆ 1 ಲಕ್ಷ ಹಾಗು 25 ಸಾವಿರ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಟ್ಟು 1.25 ಲಕ್ಷ ರೂ.ಗಳ ಚೆಕ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಪುಸ್ತಕ ವ್ಯಾಪಾರಿ 70 ವರ್ಷದ ಇಳಿವಯಸ್ಸಿನ ಅಂಧ ವ್ಯಕ್ತಿ ಜವಾಹಾರಲಾಲ್ ಡಾಗಾ ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಶಾಸಕ ಸಿದ್ದು ಸವದಿ ಹಾಗು ತಹಶೀಲ್ದಾರ ಪ್ರಶಾಂತ ಚನಗೊಂಡರ ನೇತೃತ್ವದಲ್ಲಿ ಚೆಕ್ ನೀಡುವ ಮೂಲಕ ಪರಿಹಾರ ನಿಧಿಗೆ ಮಹತ್ವ ಸಾರಿದ್ದಾರೆ. ಇದೇ ಸಂದರ್ಭ ಅಂಧ ದಾನಿ ಜವಾಹರಲಾಲ್ ಡಾಗಾ ಮಾತನಾಡಿ ಕೊರೊನಾಅ ವೈರಸ್ ತಡೆಗಟ್ಟಲು ಕೇಂದ್ರ ಹಾಗು ರಾಜ್ಯ ಸರ್ಕಾರವು ನಮ್ಮೆಲ್ಲರ ಹಿತ ಕಾಯುತ್ತಿದೆ. ನಾವೆಲ್ಲರೂ ಸೇರಿ ನಮ್ಮ ಕೈಲಾದಷ್ಟು ಧನ ಸಹಾಯ ಮಾಡೋಣ. ನಾನು ಪುಸ್ತಕ ವ್ಯಾಪಾರದಲ್ಲಿ ದುಡಿದ ಶ್ರಮದ ಹಣದಲ್ಲಿ ಒಂದಿಷ್ಟು ದೇಶ ಸೇವೆಗಾಗಿ ಸಹಾಯ ಮಾಡಿದ್ದೇನೆ ಎಂದರು. `ಪುಸ್ತಕ ವ್ಯಾಪಾರಿ ಅಂಧರಾಗಿದ್ದರೂ ತಮ್ಮ ಬದುಕೇ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಜನಸೇವೆಗೆ ಮುಂದಾಗಿರುವ ಸೇವೆ ಅನನ್ಯ ಹಾಗು ಮಾದರಿ’.----ಸಿದ್ದು ಸವದಿ, ಶಾಸಕರು.
`ಹಲವಾರು ಸಂಘ-ಸಂಸ್ಥೆ, ಅನುಕೂಲಸ್ಥರು ಧನ ಸಹಾಯ ಮಾಡಿದ್ದಾರೆ. ಇಂತಹ ಇಳಿವಯಸ್ಸಿನ ಅಂಧರೊಬ್ಬರು ದಾನ ಮಾಡಲು ಮುಂದಾಗಿರುವದು ವಿಶೇಷವೇ ಸರಿ’.----ಪ್ರಶಾಂತ ಚನಗೊಂಡ, ತಹಶೀಲ್ದಾರ. ರಬಕವಿ-ಬನಹಟ್ಟಿ.
ಬನಹಟ್ಟಿಯ ಜವಾಹರಲಾಲ ಡಾಗಾ ಅವರು ಕೋವಿಡ್–19 ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ರೂ.1ಲಕ್ಷ ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ.25000 ಮೊತ್ತದ ಚೆಕ್‍ನ್ನು ತಹಶೀಲ್ದಾರ್ ಪ್ರಶಾಂತ ಚನಗೊಂಡರಿಗೆ ನೀಡಿದರು.
Social Plugin