ತೇರದಾಳ: ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ಸರ್ಕಾರದ ವತಿಯಿಂದ ಹಡಪದ ಅಪ್ಪಣ್ಣ ಸಮಾಜದವರಿಗೆ ಕೊಡಮಾಡಿದ ೧೨೦೦-/ ರೂಗಳ ಆಹಾರದ ಕಿಟ್ಟನ್ನು ತೇರದಾಳ ನಗರ ಪ್ರದೇಶದ ಸುಮಾರು 33 ಹಡಪದ ಅಪ್ಪಣ್ಣ ಸಮಾಜದ ಫಲಾನುಭವಿಗಳಿಗೆ, ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸಿದ್ದು. ಸವದಿ. ರವರು ಇಂದು ಮುಂಜಾನೆ ತೇರದಾಳ ಪುರಸಭೆಯ ಸಭಾಭವನದಲ್ಲಿ ಉಚಿತವಾಗಿ ವಿತರಣೆ ಮಾಡಿದರು. ಸದರಿ ಕಿಟ್ ನಲ್ಲಿ ಒಂದು ಕೆಜಿ ಸಕ್ಕರೆ, ಒಂದು ಕೆಜಿ ಬೆಲ್ಲ, 1 ಕೆಜಿ ರವೆ, ಒಂದು ಕೆಜಿ ಖಾರದ ಪುಡಿ, ಅಕ್ಕಿ, ಬೇಳೆ, 100 ಗ್ರಾಮ ಚಹಾ ಪುಡಿ ಹಾಗೂ 5 ಕೆಜಿ ಗೋಧಿ ಹಿಟ್ಟನ್ನು ಒಳಗೊಂಡಿರುತ್ತದೆ. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ಶ್ರೀ ಈರಣ್ಣ ದಡ್ಡಿ, ಪುರಸಭೆಯ ಸದಸ್ಯರು ಹಾಗೂ ಹಡಪದ ಅಪ್ಪಣ್ಣ ಸಮಾಜದ ಫಲಾನುಭವಿಗಳು ಉಪಸ್ಥಿತರಿದ್ದರು.