ರಬಕವಿ-ಬನಹಟ್ಟಿಯಲ್ಲಿ ಉದ್ಯೋಗವಂಚಿತ ಹಾಗು ಸಂಕಷ್ಟದಲ್ಲಿರುವ ನೇಕಾರರಿಗೆ ಮಾಜಿ ಸಚಿವೆ ಉಮಾಶ್ರೀಯಿಂದ ದಿನಸಿ ವಸ್ತುಗಳನ್ನು ವಿತರಣೆ ಮಾಡಲಾಯಿತು. ಇದೇ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಲ್ಲಪ್ಪ ಸಿಂಗಾಡಿ, ರಾಜು ಭದ್ರನ್ನವರ, ಲಕ್ಷ್ಮಣ ದೇಸಾರಟ್ಟಿ, ಶಂಕರ ಜಾಲಿಗಿಡದ, ಈಶ್ವರ ಚಮಕೇರಿ, ಚನವೀರಪ್ಪ ಹಾದಿಮನಿ, ಮಲ್ಲಪ್ಪ ಭಾವಿಕಟ್ಟಿ, ರಾಜು ಮಟ್ಟಿಕಲ್ಲಿ, ಬಸವರಾಜ ಬೀಳಗಿ, ಓಂ ಮನಗೂಳಿ ಸೇರಿದಂತೆ ಅನೇಕರಿದ್ದರು.
ಬನಹಟ್ಟಿಯ ಅಶೋಕ ಕಾಲನಿಯಲ್ಲಿ ವಿಕಲಚೇತನರಿಗೆ ದಿನಸಿ ವಸ್ತುಗಳನ್ನು ಶಾಸಕ ಸಿದ್ದು ಸವದಿ ವಿತರಿಸಿದರು. ಆಶಿಯಾನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಮಂಜುನಾಥ ಇಜೇರಿ, ಜೆ.ಎಸ್. ಒಡೆಯರ್, ಸದಾಶಿವ ಪರೀಠ, ಸುರೇಶ ಆರಿ, ಶಂಕರ ಟಿರ್ಕಿ, ಅಲ್ಲಪ್ಪ ಯಾದವಾಡ ಸೇರಿದಂತೆ ಅನೇಕರಿದ್ದರು.

Social Plugin