ನಮ್ಮ ದಿ ನ್ಯೂ ಇಂಡಿಯನ್ ಟೈಮ್ ನ ನೂತನ ಕಚೇರಿಯನ್ನ ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿ ಇಂದು ಉದ್ಘಾಟನೆ ಮಾಡಲಾಯಿತು. ಚಿತ್ರದುರ್ಗದ ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ದೀಪ ಬೆಳಗುವ ಮೂಲಕ ಹೊಸ ಕಛೇರಿಗೆ ಚಾಲನೆ ನೀಡಿದ್ರು. ಈ ಸಂದರ್ಭದಲ್ಲಿ ಸ್ಪೀಕರ್ ಯು ಟಿ ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಇನ್ನೂ ಮುಖ್ಯ ಅತಿಥಿಗಳಾಗಿ Dr. C. ಅಶ್ವತ್ ನಾರಾಯಣ್ ಶಾಸಕರು ಮಲ್ಲೇಶ್ವರಂ, ಮಾಜಿ ಉಪಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಶ್ರೀ ಜಯಂತ್ ಕುಮಾರ್ ಅಖಿಲ ಭಾರತ ವೀರಶೈವ ವೇದಿಕೆ ರಾಷ್ಟ್ರೀಯ ಅಧ್ಯಕ್ಷರು, ಸುವರ್ಣ ನ್ಯೂಸ್ ನ ಕರೆಂಟ್ ಅಫ್ಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್, ನಟಿ ಮೇಘನಾ ಗಾಂವ್ಕರ್, ನಟ ರಾಮ್ ಪವನ್, ವಿಕ್ರಂ ಸೂರಿ, ನಮಿತಾ, ಸುಗುಣ ರಘು, ಸಂಪಾದಕ ನಿರ್ಮಾಪಕ ಮಾಧವಾನಂದ, ನಿರೂಪಕಿ ಮಧುಕಾಂತಿ ಭಾಗಿಯಾಗಿದ್ರು.
ಕಳೆದ ಬಾರಿ ಬರೀ ಕರ್ನಾಟಕದ ಮಾಧ್ಯಮಗಳಿಗೆ ಪ್ರಶಸ್ತಿ ನೀಡಿದ್ವಿ. ಈ ವರ್ಷದಿಂದ ಸೌತ್ ಇಂಡಿಯಾದ ಎಲ್ಲಾ ಮಾಧ್ಯಮಗಳ ವಿಶೇಷ ಸಾಧಕರಿಗೆ ಪ್ರಶಸ್ತಿ ಕೊಡುತ್ತೇವ ಯೋಜನೆ ಇದೆ.