ಸಚಿವರ ವಿರುದ್ಧ ಸಿಡಿಮಿಡಿಗೊಂಡ ಸವದಿ
 ಈಚೆಗೆ ಬಾಗಲಕೋಟೆಯಲ್ಲಿ ನೀರಿನ ಸಮಸ್ಯೆ ಕುರಿತು ಜಿಲ್ಲಾ ಮಟ್ಟದ ಸಭೆಯಲ್ಲಿ ಸಚಿವರನ್ನೊಳಗೊಂಡ ಸಭೆ ನಡೆಯುವಾಗ ಪಕ್ಷಪಾತ ಮಾಡಿರುವದನ್ನು ತೇರದಾಳ ಶಾಸಕ ಸಿದ್ದು ಸವದಿ ಖಂಡನೆ ವ್ಯಕ್ತಪಡಿಸಿದರು.
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ತುರ್ತು ಸಭೆ ಬಳಿಕೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರನ್ನು ಆಹ್ವಾನಿಸಿದ್ದರು. ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹಾಗು ನನ್ನನ್ನು ಮಾತ್ರ ಸಭೆಗೆ ಕರೆಯದೆ ಸಭೆ ನಡೆಸಿರುವದು ಸಮಂಜಸವಲ್ಲ. ಉಭಯ ತಾಲೂಕಿನಲ್ಲಿಯೂ ನೀರಿನ ಸಮಸ್ಯೆಯಿದೆ. ಕೇವಲ ಬಿಜೆಪಿ ಪಕ್ಷದ ಶಾಸಕರೆಂಬ ಒಂದೇ ಉದ್ದೇಶದಿಂದ ಈ ರೀತಿ ನಿರ್ಲಕ್ಷ್ಯವಹಿಸಿ ಕ್ಷೇತ್ರದ ಜನತೆಗೆ ಮೋಸವೆಸಗುವದು ಸರಿಯಲ್ಲವೆಂದು ಸಿಡಿಮಿಡಿಗೊಂಡರು.
ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಹಾಗು ಸಲಹೆ-ಸೂಚನೆಗಳನ್ನು ಸಚಿವರು ಪಡೆಯಬೇಕಿತ್ತು.
 ಈಗಲಾದರೂ ಇಲ್ಲಿನ ಸಮಸ್ಯೆ ಅರಿತು ಸಮಸ್ಯೆಗಳಿಗೆ ಇನ್ನಾದರೂ ಸ್ಪಂದಿಸಲಿಯೆಂದು ಸವದಿ ಬೇಸರ ವ್ಯಕ್ತಪಡಿಸಿದರು.