ಇಡೀ ಜಗತ್ತನೇ ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿ ಶಾಲೆ ಅಸ್ತ್ರ ಶಿಕ್ಷಣ" ಎನ್ನುವ ನೆಲ್ಸನ್ ಮಂಡೇಲಾ ರವರ ಈ ಒಂದು ನುಡಿ ಈ ಸಾಮಾಜಿಕ ಕಾರ್ಯಕ್ಕೆ ನನಗೆ ಸ್ಫೂರ್ತಿ ನೀಡಿದೆ.
ಒಳ್ಳೆ ಗುಣಮಟ್ಟದ ಶಿಕ್ಷಣ ಪಡೆಯುವದು ಪ್ರತಿಯೊಬ್ಬರ ಹಕ್ಕು, ಆ ಉದ್ದೇಶದಿಂದ ನಾವು ಈ "ಪ್ರಾಜೆಕ್ಟ್ ವಿದ್ಯಾದೇಗುಲ" ದ ಮೂಲಕ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ಒಳ್ಳೆಯ ಗುಣ ಮಟ್ಟದ ಶಿಕ್ಷಣ ಓದಗಿಸುವ ಒಂದು ಚಿಕ್ಕ ಪ್ರಯತ್ನವನ್ನು ಮಾಡುತ್ತೀದ್ದೇವೆ.
ನಾನು ಕಳೆದ ಮೂರು ವರ್ಷಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಮ್ಮೆಲ್ಲರ ಹೆಮ್ಮೆಯ ಪುತ್ರ ಶ್ರೀ ಬಿ ಡಿ ಜತ್ತಿ ರವರ ಸವಿ ನೆನಪಿಗಾಗಿ ಸ್ಥಾಪಿಸಿರುವ ಜತ್ತಿ ಫೌಂಡೇಶನ್ ಮೂಲಕ ಅನೇಕ ಸಮಾಜ ಸೇವೆಯನ್ನು ಕೈ ಗೊಂಡಿದ್ದೇವೆ ಅದ್ರಲ್ಲಿ ತುಂಗಳ ಮತ್ತು ಸಾವಳಗಿ ಗ್ರಾಮಗಳಲ್ಲಿ ಉಚಿತ ಕೋವಿಡ್ ಲಸಿಕೆ ವಿತರಣೆ ಮಾಡಿದ್ದೇವೆ, ಪ್ರವಾಹ ಪೀಡಿತ ಜನಗಳಿಗೆ ಮೂಲ ಸೌಕರ್ಯಗಳ ಕಿಟ್ಟಗಳನ್ನು ನೀಡಿದ್ದೇವೆ ಇವಾಗ ನಾವು ಶಿಕ್ಷಣದ ಬಗ್ಗೆ ಸೇವೆಯನ್ನು ಮಾಡುತಿದ್ದೇವೆ.
ನಮ್ಮ ಫೌಂಡೇಶನ್ ವಿಷನ್ ಬಾಗಲಕೋಟೆ - 2040 ಎನ್ನುವದರ ಮೂಲಕ ಇಲ್ಲಿನ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವದು ಇದರ ಮುಖ್ಯ ಉದ್ದೇಶವಾಗಿದೆ.
Un Autre Monde (UAM), a French association in Audencia Business School, and Jatti Foundation, Indian Student Community (ISC) ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದೆ.
ಫ್ರಾನ್ಸ್ ಅಡೆನ್ಸಿಯಾ ಬಿಸಿನೆಸ್ ಸ್ಕೂಲ್ ನಲ್ಲಿ ನನ್ನ ಸ್ನೇಹಿತ ಸೂರಜ್ ಓದುತ್ತಿದ್ದು ಅವರ ಈ ಕಾಲೇಜುನಲ್ಲಿ ಸಮಾಜ ಸೇವೆ ಮತ್ತು ಅಧ್ಯಾಯನ ಮಾಡಲು ಬೇರೆ ಸ್ಥಳಕ್ಕೆ ತೆರಳಿ ಅಲ್ಲಿ ಅವರು ಮಾಡುವ ಒಳ್ಳೆಯ ಗುಣಮಟ್ಟದ ಕೆಲಸಕ್ಕೆ ಅವರಿಗೆ ಮಾರ್ಕ್ಸ್ ಗಳನ್ನು ನೀಡಲಾಗುತ್ತೆ.
ಇದನ್ನು ಅರಿತ ನಾನು ತಮ್ಮ ಈ ಅಧ್ಯಾಯನವನ್ನು ನನ್ನ ಜಿಲ್ಲೆಯ ಬಾಗಲಕೋಟೆಯಲ್ಲಿ ಮಾಡಿ ತಮಗೆ ಜತ್ತಿ ಫೌಂಡೇಶನ್ ವತಿಯಿಂದ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದಾಗ, ಬಹಳ ಸಂತೋಷದಿಂದ ನನ್ನ ಈ ಅಹ್ವಾನವನ್ನು ಒಪ್ಪಿಕೊಂಡು ತೆರದಾಳ ತಾಲೂಕಿನ ಗೋಲ್ ಭಾವಿ ಮತ್ತು ಕಾಲತಿಪ್ಪಿಯ ಸರಕಾರಿ ಶಾಲೆಯನ್ನು ಆಯ್ಕೆಮಾಡಿಕೊಂಡು ಈ ಕೆಲಸವನ್ನು ಪ್ರಾರಂಭಿಸಿದ್ದೇವೆ.
ಈ ಪ್ರಾಜೆಕ್ಟ್ ಪ್ರಾರಂಭವಾಗಿದ್ದು 12/6/203 ರಂದು ಇದು ಮುಕ್ತಾಯಗೊಳ್ಳುವದು 1/7/2023 ರಂದು ಪ್ರಾಜೆಕ್ಟ್ ವಿದ್ಯಾದೇಗುಲ ದಲ್ಲಿ ಒಟ್ಟು 13 ರಿಂದ 15 ಜನ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ಫ್ರಾನ್ಸ್ ನಿಂದ 12 ವಿದ್ಯಾರ್ಥಿಗಳು ಬಂದಿದ್ದು ಮತ್ತು ಜತ್ತಿ ಫೌಂಡೇಶನ್ ನಿಂದ 3 ಜನರಿದ್ದು ಎರಡು ಟೀಮಗಳಾಗಿ ವಿಂಗಡಣೆ ಮಾಡಿ ಎರಡು ಶಾಲೆಯ ಅಭಿವೃದ್ಧಿ ಕೆಲಸ ಮಾಡುತಿದ್ದೇವೆ.
ಈ ಪ್ರಾಜೆಕ್ಟನಲ್ಲಿ ದಿನಾಲು ನಾವು ಗಳು ಸ್ವಚ್ಛತೆ, ಶಾಲೆಯ ನವಿಕರಣ, ಶೌಚಾಲಯ ನಿರ್ಮಾಣ, ಕೌಶಲ್ಯ್ ತರಬೇತಿ, ಪರಿಸರದ ಬಗ್ಗೆ ಅರಿವು ಮೂಡಿಸುವದು, ಎರಡು ದೇಶದ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುವದು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಈ ಪ್ರಾಜೆಕ್ಟ್ ವಿದ್ಯಾದೇಗುಲ ಒಳಗೊಂಡಿದೆ.
ಜುಲೈ 1ರಂದು ಈ ಶಾಲೆಗಳನ್ನು ನವಿಕರಣ ಮಾಡಿ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರ ಮಾಡುತ್ತೇವೆ.
ಈ ಕಾರ್ಯಕ್ರಮಕ್ಕೆ ಇಲ್ಲಕಲ್ಲ ಶ್ರೀಗಳು, ಕೂಡಲಸಂಗಮದ ಪೂಜ್ಯರುಗಳ ದಿವ್ಯ ನೇತೃತ್ವದಲ್ಲಿ, ಸಭಾಪತಿಗಳಾದ ಶ್ರೀ ಯು ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಆರ್ ಬಿ ತಿಮ್ಮಾಪುರ, ಜಿಲ್ಲಾಧಿಕಾರಿಗಳು, ಫ್ರಾನ್ಸ್ ಕೌನ್ಸಿಲ್ ಜನರಲ್ ಬೆಂಗಳೂರು, ಜಿಲ್ಲೆಯ DDPI ರವರುಗಳನ್ನು ಅಹ್ವಾನಸಲು ಉದ್ದೇಶಿಸಿದ್ದೇವೆ ಇದರ ಬಗ್ಗೆ ಮತ್ತು ಪ್ರಾಜೆಕ್ಟ್ ಮುಗಿದ ಮೇಲೆ ಇನ್ನೊಂದು ಪತ್ರಿಕಾ ಗೋಷ್ಠಿ ಮೂಲಕ ಪೂರ್ಣವಾದ ವಿವರವನ್ನು ನೀಡುತ್ತೇವೆ.
ಪ್ರಾಜೆಕ್ಟ್ ನಲ್ಲಿ ಭಾಗಿಯಾಗಿರುವರ ಹೆಸರುಗಳು:
ಶ್ರೀ ಧ್ರುವ ಜತ್ತಿ, ಶ್ರೀ ಸೂರಜ್, ಮೇರಿ, ಡೀಗೋ, ಲೋಯಿಸ್, ಕೆಮಲಿ, ಮೊರ್ಗನ, ಮ್ಯಾಥಿಡ್, ಫೇಲಿಕ್ಸ್, ಚಾರ್ಲಿ, ಲಾರಾ,

Social Plugin