ಕಾಂತಾರ ಚಿತ್ರದ ಯಶಸ್ಸಿನೊಂದಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದ ನಂತರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ರಿಷಬ್ ಶೆಟ್ಟಿ ಅವರಿಗೆ ಆಹ್ವಾನ ನೀಡಿತ್ತು. ಉತ್ತಮ ಆಡಳಿತ ಹಾಗೂ ಬಡವರ ಕಲ್ಯಾಣ ರಾಷ್ಟ್ರೀಯ ಸಮಾವೇಶದ ಪ್ಯಾನೆಲಿಸ್ಟ್ ಆಗಿ ರಿಷಬ್ ಶೆಟ್ಟಿ ಭಾಗಿಯಾಗಿದ್ರು.
ಈಗ ನಿರ್ಮಾಣವಾಗಿರುವ ಹೊಸ ಸಂಸತ್ ಭವನದ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ನಟ ರಿಷಬ್ ಸರ್ಕಾರ ಮುಂದಿಟ್ಟ ಬೇಡಿಕೆ ಕೂಡ ಭಾರೀ ಚರ್ಚೆ ಆಗುತ್ತಿದೆ.
ಭಾರತ ಸರ್ಕಾರ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ. ಈ ವರ್ಷದ ಘಟಿಕೋತ್ಸವದ ಥೀಮ್ ಯುವ ಶಕ್ತಿ, 6 ಗೌರವಾನ್ವಿತ ಪ್ಯಾನೆಲಿಸ್ಟ್ ಗಳು ಅನೇಕ ವಿಚಾರಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಮಯದಲ್ಲಿ ರಿಷಬ್ ಶೆಟ್ಟಿ ಮನರಂಜನೆ ಮತ್ತು ಸಿನಿಮಾ ಕ್ಷೇತ್ರದ ಪ್ರತಿನಿಧಿಯಾಗಿದ್ದರು.
ರಿಷಬ್ ತಮ್ಮ ಭಾಷಣದ ಆರಂಭದಲ್ಲಿ ನಮಗೆ ಪ್ರೇಕ್ಷಕರನ್ನು ತಲುಪುವುದು ಸವಾಲಾಗಿದೆ. ನಮಗೆ ಸರ್ಕಾರದಿಂದ ಬೆಂಬಲ ಸಿಗಬೇಕು. ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣವಾಗ್ಬೇಕು ಎಂದು - ನಟ ರಿಷಬ್ ಶೆಟ್ಟಿ ಬೇಡಿಕೆ ಮುಂದಿಟ್ಟಿದ್ದಾರೆ.
ಈ ಚರ್ಚೆಯಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ, ಓಯೋ ಸಂಸ್ಥಾಪಕ ಮತ್ತು ಸಿಇಒ, ಸಂಗೀತ ಸಂಯೋಜಕ ಅಮನ್ ಅಲಿ ಬಂಗಾಶ್, ಮಾಜಿ ಭಾರತೀಯ ಫೀಲ್ಡ್ ಹಾಕಿ ಆಟಗಾರ ಮತ್ತು ಭಾರತೀಯ ರಾಷ್ಟ್ರೀಯ ತಂಡದ ನಾಯಕ ವೀರೇನ್ ರಸ್ಕ್ವಿನ್ಹಾ, ಸಹ-ಸಂಸ್ಥಾಪಕ ಕ್ಯಾಕ್ಸ್ಫರ್ಟ್ ಯಶೋಧರ ಬಜೋರಿಯಾ ಮತ್ತು ಭಾರತೀಯ ಬಾಕ್ಸರ್ ಅಖಿಲ್ ಕುಮಾರ್ ಭಾಗವಹಿಸಿದ್ದರು.

Social Plugin