ಸತತ ಮೂರು ಬಾರಿ ಸ್ಥಳೀಯ ಅಭ್ಯರ್ಥಿಯ ಬೇಡಿಕೆಗೆ ಕಾಂಗ್ರೆಸ್ ಪಕ್ಷವು ಸ್ಪಂದಿಸಿಲ್ಲ. ಈ ಬಾರಿಯಾದರೂ ಪ್ರಬಲ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವ ವಿಶ್ವಾಸದಲ್ಲಿದ್ದೇವೆ. ಒಂದು ವೇಳೆ ಕ್ಷೇತ್ರದ ಮುಖಂಡರ ಹಾಗು ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬಂಡಾಯ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಸಿದ್ಧರಿದ್ದೇವೆಂದು ಬಾಗಲಕೋಟೆ ಜಿಲ್ಲೆಯ ತೇರದಾಳ ಕಾಂಗ್ರೆಸ್ ಮುಖಂಡ ರವೀಂದ್ರ ಬಾಡಗಿ ಸ್ಪಷ್ಟಪಡಿಸಿದರು.
ತೇರದಾಳದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗು ಮತದಾರರು ಸ್ಥಳೀಯರಿಗೇ ದೊರಕಬೇಕೆಂಬ ಬೇಡಿಕೆಯಾಗಿದೆ. ಇದನ್ನು ಹುಸಿಯಾಗಿಸದೆ ನಿರ್ಲಕ್ಷ್ಯವಹಿಸಬಾರದೆಂದು ವರಿಷ್ಠರಲ್ಲಿ ಸಾಕಷ್ಟು ಬಾರಿ ಒತ್ತಾಯ ಮಾಡಿದ್ದು, ಕೊನೆಯ ಹಂತದಲ್ಲಿ ಸ್ಥಳೀಯರಿಗೇ ಅವಕಾಶ ಕಲ್ಪಿಸಬೇಕೆಂದರು.

Social Plugin