ನೇಕಾರರ ಮತಬೇಟೆಗೆ ಬಿಜೆಪಿ ಚಾಣಕ್ಯ ಎಂಟ್ರಿ
ರಾಜ್ಯದಲ್ಲಿ ಯಾವದೇ ಕಾರಣಕ್ಕೂ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳಿಗೆ ಮಣೆ ಹಾಕಬೇಡಿ. ಈಗಾಗಲೇ ಕಾಂಗ್ರೆಸ್ ರಿವರ್ಸ್ ಗೇರ್‌ನಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿಯ ಚಿಕ್ಕೋಡಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಿಎಫ್‌ಐ ನಿಷೇಧ ಮಾಡುವ ಜರೂರವಿಲ್ಲವೆಂದು ಮತಬ್ಯಾಂಕ್ ಸಲುವಾಗಿ ಏನೆಲ್ಲ ಮಾಡುವ ಕೀಳುಮಟ್ಟದ್ದಾಗಿದೆ.
ಮುಸ್ಲಿಂ ಮೀಸಲಾತಿ ಕಡಿಮೆ ಮಾಡಿದೆಯಾದರೆ ಪರಿಶಿಷ್ಠ ಜಾತಿ, ಪಂಗಡ, ಲಿಂಗಾಯತ ಹಾಗು ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸಿದ್ದು ತಪ್ಪೇ? ರಾಜ್ಯದಲ್ಲಿ ಬಿಎಸ್‌ವೈ ಹಾಗು ಬೊಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಪರ್ವವಾಗಿದೆ. ಪೂರ್ಣ ಪ್ರಮಾಣದ ಬಹುಮತ ಕರ್ನಾಟಕದಲ್ಲಿ ರಚನೆಯಾಗುವ ಮೂಲಕ ದಕ್ಷಿಣ ಭಾರತದ ಹೆಬ್ಬಾಗಿಲಾಗಲಿದ್ದು, ಡಬಲ್ ಎಂಜಿನ್ ಸರ್ಕಾರ ಮತ್ತೇ ನಡೆಯಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲಂಪ್ರಭು, ಬಸವಣ್ಣನವರ ಪುಣ್ಯದ ನಾಡಾಗಿದ್ದು, ಜೀವನ ಪೂರ್ತಿ ವಚನಗಳನ್ನು ಹೇಳುತ್ತ ಮಾನವ ಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇಂಥವರ ಸ್ಮರಣೆಯಲ್ಲಿ ಸದಾ ಬಿಜೆಪಿ ಪಕ್ಷವಿದ್ದು, ಕೇವಲ ರಾಜಕಾರಣಕ್ಕಾಗಿ ಪಕ್ಷವಲ್ಲ ಜೊತೆಗೆ ಸಂಸ್ಕçತಿ, ರಾಷ್ಟ್ರ ಪ್ರೇಮ ಧ್ಯೇಯವಾಗಿದೆ ಎಂದರು.
ಕಾಂಗ್ರೆಸ್‌ನಲ್ಲಿ ಸಿಎಂ ನಂಬರೇ ಇಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಸಿದ್ರಾಮಯ್ಯ, ಡಿ.ಕೆ. ಶಿವಕುಮಾರ ಸೇರಿದಂತೆ ಸರದಿಯಂತೆ ಸಿಎಂ ಆಗಲು ನಿಂತಿದ್ದಾರೆ.
ನಿಮಗೆ ನಂಬರೇಇಲ್ಲ ಯಾಕೆ ಕಿತ್ತಾಡ್ತಾರೋ ತಿಳಿದಲ್ಲವೆಂದು ಶಾ ಲೇವಡಿ ಮಾಡಿದರು.
ವೇದಿಕೆ ಮೇಲೆ ಮಗ್ಗ..!
ವೇದಿಕೆ ಮೇಲೆಯೇ ಕೈಮಗ್ಗವನ್ನು ಇಡುವಲ್ಲಿ ಕಾರಣವಾಗಿತ್ತು. ಅದೇ ಕೈಮಗ್ಗದ ಮೇಲಿನ ಬಟ್ಟೆ ನೇಯ್ಗೆ ಮಾಡುವ ಮೂಲಕ ಅಮಿತ್ ಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಶೆಟ್ಟರ್, ಸವದಿ ಹೊರ ನಡೆದಿದ್ದಕ್ಕೆ ಲಾಭವಾಗಿದೆ
ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಂದ ಬಿಜೆಪಿಗೆ ಲಾಭವಾಗಿದೆ ಹೊರತು ಹಾನಿಯಾಗಿಲ್ಲ. ಇವರ ಆಟ ಕಾಂಗ್ರೆಸ್‌ನಲ್ಲಿಯೂ ಏನು ನಡೆಯಲ್ಲವೆಂದು ಅಮಿತ್ ಶಾ ಕಟುವಾಗಿ ಟೀಕಿಸಿದರು.
ನೇಕಾರರಿಗೆ ವರವಾದ ಸರ್ಕಾರ
ನೇಕಾರ ಸಮ್ಮಾನ್ ಯೋಜನೆಯಡಿ ರಾಜ್ಯದ ೧.೫ ಲಕ್ಷ ನೇಕಾರರಿಗೆ ನೇರ ಫಲ ದೊರೆಯುವಂತೆ ಮಾಡಿದೆ. ಆಯುಷ್ಮಾನ್ ಯೋಜನೆಯಡಿ ೩೮ ಲಕ್ಷ ಬಡವರು ಪ್ರಯೋಜನ ಪಡೆದಿದ್ದಾರೆಂದು ಶಾ ಹೇಳಿದರು.
ವೇದಿಕೆ ಮೇಲೆ ಸಂಸದ ಪಿ.ಸಿ. ಗದ್ದಿಗೌಡರ, ನಯಾಬ್‌ಸಿಂಗ್ ಸೈನಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಾಸಕರಾದ ಸಿದ್ದು ಸವದಿ, ಪಿ.ಎಚ್. ಪೂಜಾರ, ಬಿಜೆಪಿ ಜಿಲ್ಲಾ ಕಾರ್ಯಾಧ್ಯಕ್ಷ ನಾರಾಯಣಸಾ ಬಾಂಡಗೆ, ಬಸವರಾಜ ಕೊಣ್ಣೂರ ಸೇರಿದಂತೆ ಅನೇಕರಿದ್ದರು.
ಬಿಸಿಲಿಗೆ ಕುಗ್ಗದ ಜನ
ಮಧ್ಯಾಹ್ನ ಹೊತ್ತು ಬಿರುಬಿಸಿಲಿನಲ್ಲಿಯೂ ಸುಮಾರು 10 ಸಾವಿರಕ್ಕೂ ಅಧಿಕ ಜನರು ಸೇರಿದ್ದರು.
ಬಿಸಿಲಿನ ತಾಪಕ್ಕೆ ನೀರಿಗಾಗಿ ಪರದಾಡಿದ ದೃಶ್ಯವೂ ಕಂಡು ಬಂದಿತು.
`ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿದ್ದ ಕಾಂಗ್ರೆಸ್ ಮತ್ತಿತರ ವಾಮ ಪಕ್ಷಗಳ ವಿರೋಧದ ನಡುವೆಯೂ ಗಗನಚುಂಬಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ನೀವೆಲ್ಲ ಟಿಕೆಟ್ ತೆಗೆಸಿ ರಾಮಮಂದಿರದ ದರ್ಶನ ಪಡೆಯಿರಿ’.-----ಅಮಿತ್ ಶಾ, ಕೇಂದ್ರ ಗೃಹ ಸಚಿವ.

Social Plugin