ತೇರದಾಳ ಆಮ್ ಆದ್ಮಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ ಹಲಗಿಗೌಡರ ಗೆಲುವು ಶತಸಿದ್ಧ::AAP ರಾಜ್ಯಅಧ್ಯಕ್ಷ ರವಿಚಂದ್ರನ ನಡುಕಂಚಿ ತೇರದಾಳ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಗೆಲುವಿನ ವಾತಾವರಣವಿದೆ.
ದೇಶದಲ್ಲಿ ಕಾಂಗ್ರೆಸ ಬಿಜೆಪಿಗೆ ಭವಿಷ್ಯವಿಲ್ಲ. 
ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದೆ. 
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಮ್ಮ ಕಸಬರಗಿ ಪಕ್ಷ ಅವಶ್ಯಕತೆ ರಾಜ್ಯದಲ್ಲಿ ಇದೆ. 
ಕರ್ನಾಟಕ ರಾಜ್ಯದಲ್ಲಿ ಅಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ. 
ಅದರಲ್ಲೂ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಗೆಲುವು ಶತಸಿದ್ಧ ಎಂದು ಹೇಳಿದರು. 
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರ್ಜುನ ಹಲಗಿಗೌಡರ ಪರಾ ನಗರದಲ್ಲಿ ರೋಡ್ ಶೋ ಮಾಡುವುದರ ಮುಖಾಂತರ ಭರ್ಜರಿ ಮತಯಾಚನೆ ಮಾಡಿದರು. 
ದೇಶದ ಕೇಂದ್ರಬಿಂದು ದೆಹಲಿ ಮತ್ತು ಪಂಜಾಬ್ ನಮ್ಮ AAP ಸರ್ಕಾರವಿದೆ. 
ಈಗಾಗಲೇ ಅಲ್ಲಿ ಇರ್ತಕಂತ ಬಡವರಿಗೆ ವಿಶೇಷ ಯೋಜನೆಗಳನ್ನ ಬಡವರ ಬಾಗಿಲಿಗೆ ನಾವು ತಲುಪಿಸಿದ್ದೇವೆ. 
ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚನೆಯಾಗುತ್ತದೆ. ಬಡವರ ಮನೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಅವರ ಮನೆಗೆ ತಲುಪಿಸುವ ಪ್ರಾಮಾಣಿಕ ಕೆಲಸ ನಾವು ಮಾಡುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರು ರವಿಚಂದ್ರನ ನಡುಕಂಚಿ ಹೇಳಿದರು.
ಆಮ್ ಆದ್ಮಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ ಹಲಗಿಗೌಡರ ಮಾತನಾಡಿ
ನಾವು ರಾಜಕೀಯಕ್ಕೆ ಬಂದಿದ್ದು ಹಣ ಮಾಡಿಕೊಳ್ಳಲಿಕ್ಕೆ ಅಲ್ಲ ಬಡವರ ಸೇವೆ ಮಾಡಲಿಕ್ಕೆ. 
ನೀವು ನನಗೆ ಒಂದು ಬಾರಿ ಅವಕಾಶ ಕೊಡಿ ತೇರದಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. 
ತೇರದಾಳ ಮತಕ್ಷೇತ್ರದಲ್ಲಿ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ. 
ಬಡವರಿಗೆ ಸಿಗಬೇಕಾದ ಸರ್ಕಾರದ ಯೋಜನೆಗಳನ್ನ ಬಡವರ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನಮ್ಮದು. 
ತೇರದಾಳ ಮತಕ್ಷೇತ್ರದ ಮತದಾರರು ಪ್ರಜ್ಞಾವಂತರು.
 ಈ ಬಾರಿ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆ ನಾನು ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ನನಗಿದೆ ಎಂದು ಅರ್ಜುನ್ ಹಲಗಿಗೌಡರ ಹೇಳಿದರು.