ಪತಿ ಪರ ಪತ್ನಿ ಪ್ರಚಾರ
 ಹಣ್ಣು ತುಂಬಿದ ಬುಟ್ಟಿ ಗರ‍್ತಿನ ಪಕ್ಷೇತರ ಅಭ್ರ‍್ಥಿ ಡಾ.ಪದ್ಮಜೀತ ನಾಡಗೌಡ ಪಾಟೀಲರ ಪತ್ನಿ ಡಾ. ಮಧುಲತಾ ನಾಡಗೌಡ ಪಾಟೀಲ ಬುಧವಾರ ತೇರದಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.ಕೋವಿಡ್, ಪ್ರವಾಹ ಸೇರಿದಂತೆ ಅನೇಕ ಸಂರ್ಭಗಳಲ್ಲಿ ಸ್ಪಂದಿಸಿದ ಡಾ. ನಾಡಗೌಡರು ಸಾಕಷ್ಟು ಸೇವೆ ಒದಗಿಸಿದ್ದಾರೆ.
 ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆಯಬೇಕಿತ್ತು. ಹೈಕಮಾಂಡ್ ನಿರ್ಲಕ್ಷ್ಯಕ್ಕೆ ಅನಿವಾರ್ಯವಾಗಿ ಕ್ಷೇತ್ರದ ಮತದಾರ ಪ್ರಭುಗಳು ಪಕ್ಷೇತರವಾಗಿ ಸ್ಪರ್ಧಿಸಲು ಸಂದೇಶ ನೀಡಿರುವ ಹಿನ್ನಲೆಯಲ್ಲಿ ಅನಿವರ‍್ಯವಾಗಿ ಕಣಕ್ಕಿಳಿಯಬೇಕಾಗಿದ್ದು, ಕ್ಷೇತ್ರಾದ್ಯಂತ ಎಲ್ಲೆಡೆ ಗೆಲುವಿನ ವಿಶ್ವಾಸ ಮೂಡಿ ಬರುತ್ತಿದೆ ಎಂದರು.
ಲಲಿತಾ ನಂದೆಪ್ಪನವರ ಮಾತನಾಡಿ, ಜಾತಿ, ಪಕ್ಷ ಬೇಧ ಮರೆತು ಕ್ಷೇತ್ರದ ಬಹುತೇಕ ಕುಟುಂಬಗಳಿಗೆ ಸಹಾಯ ಮಾಡಿದ ಕರ‍್ತಿ ಡಾ. ಪದ್ಮಜೀತ ನಾಡಗೌಡರದ್ದಾಗಿದೆ. 
ನೇತ್ರ ತಪಾಸಣೆಯಲ್ಲಂತೂ ಬಡವರಿಗೆ ಆಶಾಕಿರಣವಾಗಿ ಸೇವೆ ಒದಗಿಸಿದ್ದು, ಎಲ್ಲ ರೀತಿಯ ಸಹಾಯ-ಸಹಕಾರ ಚುನಾವಣೆಗೆ ಆಶೀರ್ವಾದವಾಗಲಿದೆ ಎಂದರು.
ಡಾ. ಮಧುಲತಾ ನಾಡಗೌಡ ಪಾಟೀಲ, ಲಲಿತಾ ನಂದೆಪ್ಪನವರ, ವಿದ್ಯಾ ನಾಡಗೌಡ, ಸುಜಾತಾ ಮಂಗೋಜಿ, ಸಾವಿತ್ರಿ ಗಾಣಿಗೇರ, ತ್ರಿಶಲಾ ಮಗದುಮ್, ಪಪ್ಪಕ್ಕ ನಂದೆಪ್ಪನವರ, ಪದ್ಮಶ್ರೀ ದೇಸಾಯಿ, ಮುತ್ತವ್ವ ಸಂತಿ, ಕಮಲಪ್ಪ ಮಾಟ, ಸುನೀತಾ ಚವಜ, ಶೋಭಾ ಹಟ್ಟಿ, ಶಾರದಾ ಬಿಳಿಮೀಸಿ, ಅಂಜನಾ ನಂದೆಪ್ಪನವರ, ಪ್ರತಿಭಾ ಚವಜ, ಸುಶ್ಮಾ ಅಮ್ಮಣಗಿಮಠ, ಜಯಶ್ರೀ ಹೊಸೂರ ಸೇರಿದಂತೆ ಅನೇಕರಿದ್ದರು.