ದೇಶದ ನೊಗ ಹೊತ್ತ ಜೋಡೆತ್ತು ಶಾ-ಮೋದಿ
 ಭಾರತ ದೇಶ ಕಂಡ ಅಪರೂದ ಜೋಡೆತ್ತು ಪ್ರಧಾನಿನರೇಂದ್ರ ಮೋದಿ ಹಾಗು ಗೃಹ ಸಚಿವ ಅಮಿತ್ ಶಾ ಅವರ ತಂತ್ರಗಾರಿಕೆಯಿಂದ ಜಗತ್ತಿನ ಎಲ್ಲ ದೇಶಗಳು ಭಾರತಕ್ಕೆ ರತ್ನಗಂಬಳಿ ಹಾಸುವಲ್ಲಿ ಕಾರಣವಾಗಿದ್ದು, ದೇಶದ ನೊಗ ಹೊತ್ತ ಜೋಡೆತ್ತುಗಳು ಜಗತ್ತಿಗೆ ಮಾದರಿಯೆಂದು ತೇರದಾಳ ಶಾಸಕ, ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಹೇಳಿದರು.
ಸೋಮವಾರ ರಬಕವಿಯ ಎಂ.ವಿ. ಪಟ್ಟಣದ ಚಿಕ್ಕೋಡಿ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ತೇರದಾಳ ಕ್ಷೇತ್ರದ ಮತದಾರರ ಪರವಾಗಿ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ರೀಡಾಂಗಣದ ಶಾಮಿಯಾನ ವೀಕ್ಷಣೆ ನಡೆಸಿದರು.
ಕಾರ್ಯಕ್ರಮದ ಮೊದಲು ರಬಕವಿ ಬಸ್ ನಿಲ್ದಾಣ ಹತ್ತಿರದ ಜೈನ ಬಸದಿಗೆ ದರ್ಶನ ಪಡೆದು ನಂತರ ವೇದಿಕೆ ಏರಲಿದ್ದಾರೆ. ಇವರೊಂದಿಗೆ ಹಲವಾರು ರಾಜ್ಯ ನಾಯಕರು ಹಾಗು ಸಂಸದರು ಆಗಮಿಸಲಿದ್ದಾರೆಂದು ಸವದಿ ತಿಳಿಸಿದರು.