ಕ್ಷೇತ್ರದಲ್ಲಿ ಶೂನ್ಯವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಕಾಲಿಗೆ ಚಕ್ರ ಕಟ್ಟಿಕೊಂಡು ತನು-ಮನ-ಧನದೊಂದಿಗೆ ಪ್ರಾಮಾಣಿಕವಾಗಿ ಪಕ್ಷ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದೇನೆ. ಹೈಕಮಾಂಡ್ ನಿರ್ಧಾರದಿಂದ ಕಾರ್ಯಕರ್ತರಿಗೆ ಹಾಗು ಮತದಾರರಿಗೆ ತುಂಬಾ ನೋವಾಗಿದ್ದು, ಅಭ್ಯರ್ಥಿ ಬದಲಾವಣೆಯಾಗಲೇಬೇಕೆಂಬುದು ಕ್ಷೇತ್ರದ ಜನತೆಯ ಅಪೇಕ್ಷೆಯಾಗಿದೆಯೆಂದು ಡಾ. ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.
ರಬಕವಿಯ ತಮ್ಮ ನಿವಾಸದೆದುರು ಸಾವಿರಾರು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ದೊರಕುವ ಎಲ್ಲ ನಿರೀಕ್ಷೆಗಳಿದ್ದವು. ಕೆಲವರ ಲಾಭಿಯಿಂದ ಟಿಕೆಟ್ ಸೋಲುವ ವ್ಯಕ್ತಿಗೆ ದೊರಕಿದೆ. ಇನ್ನೂ ಕಾಲ ಮಿಂಚಿಲ್ಲ. ಹೈಕಮಾಂಡ್ ಅಭ್ಯರ್ಥಿ ಬದಲಾವಣೆ ಮಾಡಲೇಬೇಕೆಂದು ಒತ್ತಾಯಿಸಿದರು.
ಮತ್ತೋರ್ವ ಅಭ್ಯರ್ಥಿ ಆಕಾಂಕ್ಷಿಯಾದ ಡಾ. ಎ.ಆರ್. ಬೆಳಗಲಿ ಈಗಾಗಲೇ ಮನನೊಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ಕಾರ್ಯಕರ್ತರಿಗಾದ ಅನ್ಯಾಯವನ್ನು ಸರಿದೂಗಿಸಿ, ಅಭ್ಯರ್ಥಿ ಬದಲಿಸಬೇಕೆಂದರಲ್ಲದೆ 4 ದಶಕಗಳಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದಕ್ಕೆ ನೀಡಿದ ಕಾಣಿಕೆ ಇದಾಗಿದೆಯೆಂದು ಭಾವುಕರಾಗಿ ಬೇಸರವ್ಯಕ್ತಪಡಿಸಿದರು.
ಸಾಗರ ಚವಜ ಮಾತನಾಡಿ, ಹೈಕಮಾಂಡ್‌ನ ದುಸ್ಸಾಹಸ ಸರಿಯಲ್ಲ. ಕೆಳಮಟ್ಟದ ಸರ್ವೆ ಬದಲಿ ಯಾರದೋ ಮಾತಿಗೆ ಲಾಭಿಯಾಗಿದೆ. ಇದನ್ನು ಸರಿಪಡಿಸದಿದ್ದಲ್ಲಿ ಪಕ್ಷದಲ್ಲಿರುವ ಸಾವಿರಾರು ಕಾರ್ಯಕರ್ತರೊಂದಿಗೆ ಡಾ. ಪದ್ಮಜಿತ ನಾಡಗೌಡ ಪಾಟೀಲ ಅಥವಾ ಡಾ. ಎ.ಆರ್. ಬೆಳಗಲಿಯವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಸ್ಪರ್ಧೆಗಿಳಿಸುವದು ನಿಶ್ಚಿತವಾಗಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದೆಂದರು.
ಉಮಾಶ್ರೀಗೆ ಬರ್ಷನ್ ಸ್ಟೋ ಎಂದ ಸೊರಗಾಂವಿ
ಅಧಿಕಾರದಾಸೆಗೆ ಏನೆಲ್ಲ ಮಾಡುವಲ್ಲಿ ಮಾಜಿ ಸಚಿವೆ ಉಮಾಶ್ರೀ ಕಾರಣರಾಗಿ ಬರ್ಷನ್ ಸ್ಟೋ ಆಗಿದ್ದಾರೆಂದು ಮುಖಂಡ ಶಂಕರ ಸೊರಗಾಂವಿ ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರವಧಿಯಲ್ಲಿ ಬಿಜೆಪಿ ಗುತ್ತಿಗೆದಾರರಿಗೆ ಟೆಂಡರ್ ಹಂಚಿದ್ದಾರೆ. ಅಲ್ಲದೆ ಗ್ರಾಪಂ, ತಾಪಂ ಚುನಾವಣೆಗಳಲ್ಲಿ ಬೆಂಬಲಿಗ ಅಭ್ಯರ್ಥಿಗಳ ಸೋಲಿಗೆ ಉಮಾಶ್ರೀ ಕಾರಣವೆಂದು ಗಂಭೀರವಾಗಿ ಆರೋಪಿಸಿದರು.
ರಾಜು ದೇಸಾಯಿ, ರಾಮಣ್ಣ ಹುಲಕುಂದ, ಸಂಗಯ್ಯ ಅಮ್ಮಣಗಿಮಠ, ಭೀಮಶಿ ಪಾಟೀಲ, ಜಿನ್ನಪ್ಪ ಹೊಸೂರ, ನೀಲೇಶ ದೇಸಾಯಿ, ಬುಡಾನ್ ಜಮಾದಾರ, ಹಿರೇಮಠ, ಅಶೋಕ ವಸ್ತçದ, ಸುಕುಮಾರ ಪಾಟೀಲ, ಸದಾಶಿವ ಜಂಬಗಿ, ಅಶೋಕ ಸವದಿ, ರಾಚಯ್ಯ ಭದ್ರದ, ಮಾಳು ಹಿಪ್ಪರಗಿ ಸೇರಿ ಅನೇಲರಿದ್ದರು.....

Social Plugin