ಧರ್ಮ-ಸಂಸ್ಕಾರದಿಂದಲೇ ಮಾನವ ಸಮುದಾಯಕ್ಕೆ ನೆಮ್ಮದಿಯೆಂದು ಹಟಗಾರ ಪೀಠದ ಜಗದ್ಗುರು ಶ್ರೀ ಚಿಕ್ಕರೇವಣಸಿದ್ಧ ಶರಣರು ನುಡಿದರು.
ಅವರು ಬನಹಟ್ಟಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ಅಂಬಲಿ ನಿವಾಸಕ್ಕೆ ಭೆಟ್ಟಿ ನೀಡಿ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಬ್ಬರೂ ಮಠ, ಮಂದಿರಗಳಲ್ಲಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಮಾತ್ರ ಸಾತ್ವಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು.ಹಲವಾರು ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಉದ್ದಾರಕ್ಕಾಗಿ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು ಈಗಲೂ ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಎಂದರು.

Social Plugin