2017ರಿಂದ ದಿ ನ್ಯೂ ಇಂಡಿಯಾ ಟೈಮ್ಸ್ ಮೀಡಿಯಾ ಅವಾರ್ಡ್ ನೀಡುತ್ತ ಬಂದಿದೆ. ಈ ವರ್ಷ ಈ ಅವಾರ್ಡ್ ಫಂಕ್ಷನ್ ವಿಭಿನ್ನವಾಗಿ 2023 ಮಾರ್ಚ್ 6 ರಂದು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಅನೇಕ ಪೂಜ್ಯರು ಆಶೀರ್ವದಿಸಿದ್ದಾರೆ. ಅಲ್ಲದೇ ಈ ಬಾರಿಯ ಕಾರ್ಯಕ್ರಮಕ್ಕೆ ನಾಡಿನ ಪೂಜ್ಯರು, ಚಿತ್ರರಂಗದ ಸ್ಟಾರ್ ನಟ ನಟಿಯರು ಹಾಗು ಸಾಹಿತಿಗಳು, ಸಮಾಜ ಸೇವಕರು, ರಾಜಕೀಯ ನಾಯಕರು ಸಹ ಪಾಲ್ಗೊಳ್ಳಲಿದ್ದಾರೆ. ಪ್ರತೀ ವರ್ಷ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಮಾಧ್ಯಮದಲ್ಲಿರುವ ಪ್ರತಿಭಾನ್ವಿತರಿಗೆ ಅವಾರ್ಡ್ ನೀಡಿ ಗೌರವಿಸುತ್ತಿದೆ. ಮೊದಲೆಲ್ಲ ಬರೀ ನಿರೂಪಕರಿಗಷ್ಟೇ ಈ ಅವಾರ್ಡ್ ನೀಡಲಾಗುತ್ತಿತ್ತು. ಆದ್ರೆ ನಂತರದಲ್ಲಿ ರಿಪೋರ್ಟರ್, ಕ್ಯಾಮೆರಾ ಮ್ಯಾನ್, ವೀಡಿಯೋ ಎಡಿಟರ್, ಗ್ರಾಫಿಕ್ಸ್ ಡಿಸೈನರ್ ಇತ್ಯಾದಿ ವಿಭಾಗದ ಪ್ರತಿಭೆಗಳನ್ನ ಗುರುತಿಸಿ, ಪ್ರಶಸ್ತಿ ನೀಡಲು ಪ್ರಾರಂಭಿಸಿದೆ. ಈ ಬಾರಿ ಇನ್ನೂ ಕೆಲ ವಿಭಾಗಗಳು ಪ್ರಶಸ್ತಿ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ. ಕನ್ನಡದ ಪ್ರಸಿದ್ಧ ದೃಶ್ಯ ಮಾಧ್ಯಮಗಳು ಹಾಗು ಹೆಸರಾಂತ ವೃತ್ತಿಪರ ಪತ್ರಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ.

Social Plugin