ವರಿಷ್ಠರಿಗೆ ಪತ್ರ ಸಂದೇಶ
ಸ್ಥಳೀಯರಿಗೆ ನೀಡದಿದ್ದರೆ ಬಿಜೆಪಿಯಿಂದ ಕ್ಷೇತ್ರ ಕಳೆದುಕೊಳ್ಳುತ್ತೇವೆ. ಹಾಲಿ ಶಾಸಕರು ಭ್ರಷ್ಟಾಚಾರ ಆರೋಪ ಎದುರಿಸಿ ಪಕ್ಷಕ್ಕೆ ಭಾರಿ ಮುಜುಗರ ತರುವಲ್ಲಿ ಕಾರಣವಾಗಿದೆ. ಅಲ್ಲದೆ ಸ್ವಕ್ಷೇತ್ರದ ಜನತೆಗೆ ಹಾಗು ಪಕ್ಷದ ಮುಖಂಡರಿಗೆ ನಿಷ್ಠೆ ತೋರಬೇಕಾದ ಅನಿವಾರ್ಯತೆ ಬಿಜೆಪಿಗಿದ್ದು, ಈ ಕುರಿತು ವರಿಷ್ಠರಿಗೆ ಪತ್ರದ ಮುಖಾಂತರ ಒತ್ತಡ ಹೇರಲಾಗಿದೆ ಎಂದು ಮುಖಂಡ ಭೀಮಶಿ ಮಗುದುಮ್ ತಿಳಿಸಿದರು.
ಬನಹಟ್ಟಿಯ ಬಂಗಾರೆವ್ವ ತಟ್ಟಿಮನಿ ಸಭಾಂಗಣದಲ್ಲಿ ತೇರದಾಳ ಕ್ಷೇತ್ರದ ನೂರಾರು ಬಿಜೆಪಿ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೆ ಈ ಭಾರಿ ತೇರದಾಳ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಿದೆ. ಈ ಕುರಿತಾಗಿ ಆರ್‌ಎಸ್‌ಎಸ್, ಹೈಕಮಾಂಡ್ ಹಾಗು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು, ಕ್ಷೇತ್ರದಿಂದ ಏಳೆಂಟು ಜನ ಪ್ರಬಲ ಆಕಾಂಕ್ಷಿಗಳಿದ್ದಾರೆ. ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತ ಪಕ್ಷ ಬಲಪಡಿಸಿದ್ದಾರೆ. ಆದರೆ ಇರ‍್ಯಾದರೂ ಟಿಕೆಟ್ ಅಭ್ಯರ್ಥಿಯಾಗಿ ಆಕಾಂಕ್ಷಿಗಳಾದರೆ ಪಕ್ಷದಿಂದ ಹೊರಹಾಕುವ ವ್ಯವಸ್ಥೆ ಹಾಲಿ ಶಾಸಕ ಸಿದ್ದು ಸವದಿಯವರಿಂದ ನಡೆಯುತ್ತಿದೆ ಎಂದು ಮಗದುಮ್ ಬಲವಾಗಿ ಆರೋಪಿಸಿದರು.
ಕ್ಷೇತ್ರಾದ್ಯಂತ ಎರಡನೇ ಹಂತದ ನಾಯಕತ್ವ ಹೊಂದಿದವರನ್ನು ತುಳಿಯುವ ತಂತ್ರ ಶಾಸಕರಿಂದ ನಡೆಯುತ್ತಿದೆ. ಈ ಭಾರಿಯೂ ಟಿಕೆಟ್ ಆಕಾಂಕ್ಷಿಗಳಾದವರನ್ನು ಪಕ್ಷದಿಂದ ಹೊರಹಾಕುವ ಎಲ್ಲ ಯತ್ನಗಳನ್ನೂ ನಡೆಸುತ್ತಿದ್ದಾರೆಂದರು.
ಕ್ಷೇತ್ರ ಕೊಂಡಂತೆ ತಾಲಿಬಾನ್ ಆಡಳಿತ
ಅಶ್ಲೀಲ ಶಬ್ದಗಳಿಂದ ಕ್ಷೇತ್ರ ಕೊಂಡಂತೆ ಶಾಸಕ ಸಿದ್ದು ಸವದಿಯವರ ಭಾಸವಾಗಿದೆ. ತಾಲಿಬಾನ್‌ನಂತೆ ತೇರದಾಳ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತ, ತನ್ನ ವಿರೋಧಿಗಳೆಂದು ತಾವೇ ಗುರ್ತಿಸಿಕೊಂಡು ಅಂಥವರಿಗೆ ಮನೆಯಿಂದಲೇ ಹೊರಬಾರದಂತೆ ವಿನಾಕಾರಣ ಅಡ್ಡಿಪಡಿಸುತ್ತ ಅಧಿಕಾರ ದುರ್ಬಳಕೆಯಲ್ಲಿ ನಿರತರಾಗಿದ್ದು, ಕಳೆದ ಬಿಡಿಸಿಸಿ ಚುನಾವಣೆಯಲ್ಲಿಯೂ ಅಧಿಕಾರ ದುರುಪಯೋಗದಿಂದ ಸದಸ್ಯರಾದವರೆಂದು ಮಗದುಮ್ ತಿಳಿಸಿದರು.
ಬಸವರಾಜ ಬಾಳಿಕಾಯಿ ಮಾತನಾಡಿ, ನಾನು ಬಿಜೆಪಿಯಲ್ಲಿಯೇ ಇದ್ದೇನೆ. ವರಿಷ್ಠರೇ ನನ್ನನ್ನು ಗುರ್ತಿಸುತ್ತಿರುವಾಗ ಸ್ಥಳೀಯ ಶಾಸಕರು ಕೇವಲ ವಯಕ್ತಿಕ ಸ್ವಾರ್ಥಕ್ಕೋಸ್ಕರ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಹೇಳುತ್ತಿರುವದು ಸರಿಯಲ್ಲವೆಂದರು.
ಶಾಸಕ ಸಿದ್ದು ಸವದಿಯವರ ದಬ್ಬಾಳಿಕೆಯಿಂದ ಕ್ಷೇತ್ರದ ಜನತೆ ಹಾಗು ಪಕ್ಷದ ಮುಖಂಡರು ರೋಷಿ ಹೋಗಿದ್ದಾರೆ. ಇಷ್ಟೊಂದು ದಬ್ಬಾಳಿಕೆಯಲ್ಲಿ ಪರಿವರ್ತನೆ ಹೊಂದುತ್ತಾ ಜನಪ್ರತಿನಿಧಿಯಾದವರ ನೈತಿಕತೆ ಅಲ್ಲವೆಂದು ಬಾಳಿಕಾಯಿ ಖಾರವಾಗಿ ನುಡಿದರು.
ಗುಲಾಮಗಿರಿ ಆಡಳಿತ ಹಿಟ್ಲರ್‌ಶಾಹಿಯಂತೆ ಗುಲಾಮಗಿರಿ ಆಡಳಿತ ನಡೆಸುತ್ತಿರುವಸವದಿ, ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳಿದರೆ ಪಕ್ಷದ್ರೋಹಿಗಳೆಂಬ ಹಣೆಪಟ್ಟಿ ಕಟ್ಟುತ್ತಿರುವದು ಸರಿಯಲ್ಲ. ಕುಟುಂಬ ರಾಜಕಾರಣದೊಂದಿಗೆ ತಮಗೆ ಮರ‍್ನಾಲ್ಕು ರಾಜ್ಯದ ಹುದ್ದೆಯೊಂದಿಗೆ ಕುಟುಂಬದವರಿಗೂ ಸ್ಥಾನ-ಮಾನವಾದರೆ ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರ ಗತಿಯೇನು? ಎಂದು ಬಾಳಿಕಾಯಿ ಪ್ರಶ್ನಿಸಿದರು. ಈ ಭಾರಿ ಯಾವದೇ ಕಾರಣಕ್ಕೂ ಬಿಜೆಪಿ ಪಕ್ಷದಿಂದ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು. ತೇರದಾಳ ಕ್ಷೇತ್ರವಾಗಿ ೧೫ ವರ್ಷಗಳೇ ಕಳೆದಿವೆ, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗು ಪಕ್ಷವನ್ನು ಗೆಲ್ಲಿಸುವದಕ್ಕಾಗಿ ಸ್ಥಳೀಯ ಅಭ್ಯರ್ಥಿಗೆ ಸ್ಪರ್ಧೆಗೆ ಅವಕಾಶ ನೀಡಬೇಕೆಂದರು. ದೇವಲ ದೇಸಾಯಿ, ಶಂಕರಗೌಡ ಪಾಟೀಲ, ಮಹಾದೇವ ಮೇಟಿ, ಬಸವರಾಜ ದಲಾಲ, ಮಲ್ಲಣ್ಣ ಬಾವಲತ್ತಿ, ಪಂಡಿತ ಪಟ್ಟಣ, ಶೇಖರ ಮಾಲಾಪುರ, ಹರ್ಷವರ್ಧನ ಪಟವರ್ಧನ, ಎಸ್.ಆರ್. ಪಾಟೀಲ, ಉಳ್ಳಾಗಡ್ಡಿ, ದಾನಪ್ಪ ಆಸಂಗಿ, ಶಂಕರ ಜುಂಜಪ್ಪನವರ, ಕಿರಣ ದೇಸಾಯಿ, ಡಾ. ಪಿ.ವಿ. ಪಟ್ಟಣ, ದುಂಡಪ್ಪ ಮಾಚಕನೂರ, ರಾಮಣ್ಣ ಭದ್ರನ್ನವರ ಸೇರಿದಂತೆ ಕ್ಷೇತ್ರದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Social Plugin