ಹಳ್ಳೂರ 17:ಬಬಲಾದಿ ಸದಾಶಿವ ಮುತ್ತ್ಯಾ ಮುರಲೋಕದ ಒಡೆಯ ಹಿಂದಿನದು ಮುಂದಿನದು ಸಾರಿ ಹೇಳಿದ ತ್ರಿಕಾಲ ಜ್ಞಾನಿ ಜ್ಞಾನದ ಬಲದಿಂದ ಹೊಳಿಯನ್ನೇ ಸಾರಾಯಿ ಮಾಡಿದವರು ಅವರು ಜ್ಞಾನದ ನಿಶೆಯಲ್ಲಿ ಇರುತ್ತಿದ್ದರು. ಜನರು ಬೇರೆ ತಿಳಿದುಕೊಂಡು ಸೆರೆ ಅಂದರೆ ಸೆರೆವಾಸ ಎಂಬಂತೆ ಸಾರಾಯಿ ಕುಡಿದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಜ್ಞಾನಿಗಳು ಹೇಳಿದನ್ನು ಕೇಳಿ ಜೀವನ ಉದ್ದಾರ ಮಾಡುಕೊಳ್ಳಿರೆಂದು ಬಬಲಾದಿ ಹೊಳಿ ಮಠದ ಸಿದ್ರಾಮಯ್ಯ ಮಹಾಸ್ವಾಮಿಗಳು ಹೇಳಿದರು. ಅವರು ಹಳ್ಳೂರ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಹಮ್ಮಿಕೊಂಡ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ತಂದೆ ತಾಯಿ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ನೀತಿ ಧರ್ಮದ ದಾರಿಯನ್ನು ತೋರಿಸಿ ಉದ್ದಾರ ಮಾಡಬೇಕು. ಹೆಣ್ಮಕ್ಕಳು ಭಾರತೀಯ ಸಂಸ್ಕೃತಿಯಂತೆ ಮೈ ತುಂಬ ಬಟ್ಟೆ ಧರಿಸಿ ನಡುವಳಿಕೆಯಲ್ಲಿ ಶುದ್ಧವಿರಬೇಕು. ಯುವಕ ಯುವತಿಯರು ಮೊಬೈಲ್ ಹೆಚ್ಚಾಗಿ ಉಪಯೋಗಿಸಿ ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುವ ಬದಲು ಮಹಾಭಾರತ ವಚನಗಳನ್ನು ಓದಿ ಜೀವನ ಉದ್ದಾರ ಮಾಡಿಕೊಳ್ಳಿರಿ. ಭೂಮಿಗೆ ಬಿದ್ದ ಬೀಜ ಪಲವತ್ತತೆ ನೀಡಿದಂತೆ ಸದಾಕಾಲ ದೇವರ ನಾಮಸ್ಮರಣೆ ಮಾಡಿದರೆ ಕಷ್ಟಗಳು ಬಯಲಾಗುತ್ತವೆ. ಆಸ್ತಿ ಅಧಿಕಾರ ಜನ ಬೆಂಬಲವಿದೆ ಅಂಥ ಬೇರೆಯವರ ಮೇಲೆ ಅನ್ಯಾಯ ಮಾಡಿದರೆ ಹಾಳಾಗುವ ಕಾಲ ಬರುವುದು. ದಾನ ಧರ್ಮ ಜ್ಞಾನ ಮಾಡಿ ಪುಣ್ಯ ಪಡೆದುಕೊಳ್ಳಿರಿ. ಹಿಂದೆ ತಾವು ಮಾಡಿದ ಪಾಪ ಮುಂದಿನ ಪೀಳಿಗೆ ಅನುಭವಿಸಬೇಕಿತ್ತು ಈಗ ಇಲ್ಲಿಯೇ ಡ್ರಾ ಇಲ್ಲಿಯೇ ಬಹುಮಾನ ತಾವು ಮಾಡಿದ ಪಾಪ ಕರ್ಮದ ಫಲ ತಾವೇ ಅನುಭವಿಸ ಬೇಕಾಗುತ್ತದೆ. ಅನ್ಯಾಯ ಮಾಡಿ ದೇವರ ಹುಂಡೆಯಲ್ಲಿ ಹಣ ಹಾಕಿದರೆ ಪಾಪ ಪರಿಹಾರವಾಗುವದಿಲ್ಲ.ಸತ್ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುವುದು ತಂದೆ ತಾಯಿಯನ್ನು ಮುಪ್ಪಿನ ಕಾಲಕ್ಕೆ ದ್ವೇಷಿಸದೆ ಸರಿಯಾಗಿ ಆರೈಕೆ ಮಾಡ ಬೇಕೆಂದು ಹೇಳಿದರು. ಸಾನಿಧ್ಯ ವಹಿಸಿದ ಬಸವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪ್ರಾರಂಭದಲ್ಲಿ ಗ್ರಾಮದ ಪ್ರಮುಖ ಬಿದಿಗಳಲ್ಲಿ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಉತ್ಸವ ಜರುಗಿತು. ಕಾರ್ಯಕ್ರಮದಲ್ಲಿ ರವಿ ಗುರುಸ್ವಾಮಿ.ಕೃಷ್ಣ ಪೂಜೇರಿ.ಮಲ್ಲಪ್ಪ ಗುರುಸ್ವಾಮಿ. ದುಂಡಪ್ಪ ಗುರುಸ್ವಾಮಿ. ಅಶೋಕ, ಶ್ರೀಮಂತ, ಗುರುಸ್ವಾಮಿ. ನಿಂಗಪ್ಪ ನಾವಿ ಗುರುಸ್ವಾಮಿ. ಮಹಾದೇವ ನಿಡೋಣಿ. ನಾರಾಯಣ ಪೂಜೇರಿ ಸೇರಿದಂತೆ ಗ್ರಾಮದ ಗುರು ಹಿರಿಯರಿದ್ದರು. ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಅಗ್ನಿ ಹಾಯ್ದರು. ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.