ಈ ಸಂದರ್ಭದಲ್ಲಿ ಜಂಕಾರ್ ಸಂಸ್ಥೆ "ಹೃದಯವಂತ ವಿಷ್ಣು" ಎಂಬ ಹಾಡನ್ನು ಬಿಡುಗಡೆ ಮಾಡವ ಮೂಲಕ ವಿಷ್ಣುವರ್ಧನ್ ಅವರಿಗೆ ಗಾನನಮನ ಸಲ್ಲಿಸಿದೆ.
ಖ್ಯಾತ ನಿರ್ದೇಶಕ, ನಟ, ಸಾಹಿತಿ, ಸಂಗೀತ ನಿರ್ದೇಶಕ ಎಸ್ ನಾರಾಯಣ್ ಈ "ಹೃದಯವಂತ ವಿಷ್ಣು" ಹಾಡನ್ನು ಬರೆದು, ಸಂಗೀತ ನೀಡಿದ್ದಾರೆ. ಈ ಹಿಂದೆ ಕೂಡ ಎಸ್ ನಾರಾಯಣ್ ಅವರು ರಚಿಸಿ, ಸಂಗೀತ ನೀಡಿರುವ ಅನೇಕ ಹಾಡುಗಳು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಹಲವು ವರ್ಷಗಳ ನಂತರ ಮತ್ತೆ ಎಸ್ ನಾರಾಯಣ್ - ಜಂಕಾರ್ ಮ್ಯೂಸಿಕ್ ಕಾಂಬಿನೇಶನ್ ನಲ್ಲಿ ಉತ್ತಮ ಗೀತೆಯೊಂದು ಬಿಡುಗಡೆಯಾಗಿದೆ. ಖ್ಯಾತ ಗಾಯಕ ಅರ್ಫಜ್ ಉಲ್ಲಾಳ್ ಈ ಗೀತೆಯನ್ನು ಸುಮಧುರವಾಗಿ ಹಾಡಿದ್ದಾರೆ.

Social Plugin