ನೇಕಾರರ ಮೂಗಿಗೆ ತುಪ್ಪ ಸವರುತ್ತಿರುವ ಸರ್ಕಾರ- ಅರ್ಜುನ ಹಲಗಿಗೌಡರ
ರಬಕವಿ ಬನಹಟ್ಟಿ ಚುನಾವಣೆ ಸಮೀಪ ಬಂದಾಗ ಸರ್ಕಾರಗಳಿಗೆ ನೇಕಾರರು ನೆನಪಾಗುತ್ತಾರೆ.ಪ್ರತಿ ಬಾರಿಯೂ ನೇಕಾರರ ಸಮಸ್ಯೆಗಳನ್ನು ಪಟ್ಟಿ ಮಾಡುತ್ತ ಬಂದಿರುವ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸದೇ ನೇಕಾರರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿಗೌಡರ ಆರೋಪಿಸಿದ್ದಾರೆ. 
ಕಳೆದ ಬಾರಿಯೂ ಸರ್ಕಾರ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಕಾರರ ಸಮಸ್ಯೆಗಳನ್ನು ಪಟ್ಟಿ ಮಾಡಿ,ಎಲ್ಲ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿತ್ತು.ಆದ್ರೆ ಈವರೆಗೂ ಸರ್ಕಾರ ಎಷ್ಟು ಸಮಸ್ಯೆಗಳನ್ನು ಬಗೆಹರಿಸಿದೆ ಎನ್ನುವದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹಲಗಿಗೌಡರ ಸವಾಲು ಹಾಕಿದ್ದಾರೆ. 
ತೇರದಾಳ ಮತಕ್ಷೇತ್ರದಲ್ಲಿ ಅತೀ ಹೆಚ್ಚು ನೇಕಾರರ ಕುಟುಂಬಗಳಿವೆ,ಸಾಲದ ಬಾಧೆ ತಾಳಲಾರದೆ ಈವರೆಗೆ 34 ಜನರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರಕ್ಕೆ ನಿಜವಾಗಿಯೂ ನೇಕಾರರ ಬಗ್ಗೆ ಕಾಳಜಿ ಇದ್ದಲ್ಲಿ ನೇಕಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು,ಬಡ ನೇಕಾರರಿಗೆ ವಿದ್ಯುತ್ ದರದಲ್ಲಿ ಶೇ 50 ರಷ್ಟು ರಿಯಾಯತಿ ಕೊಡಬೇಕು ಎಂದು ಅರ್ಜುನ ಹಲಗಿಗೌಡರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. 
ಸರ್ಕಾರ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವದರಿಂದ ನೇಕಾರರು ನಾಳೆ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದು ನೇಕಾರರ ಹೋರಾಟಕ್ಕೆ ಆಮ್ ಆದ್ಮಿ ಬೆಂಬಲಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ಜೊನಲ್ ಹೆಡ್ ಶ್ರೀ ರಾಜೀವ ಟೋಪಣ್ಣವರ ಮತ್ತು ಅರ್ಜುನ ಹಲಗಿಗೌಡರ ಆಮ್ ಆದ್ಮಿ ಪಕ್ಷ ತೆರದಾಳ ಮತಕ್ಷೆತ್ರರವರು ತಿಳಿಸಿದ್ದಾರೆ.