'ಮೆಗಾ ಪವರ್ ಸ್ಟಾರ್' ರಾಮ್​ ಚರಣ್ ಅಭಿನಯದ ಹೊಸ ಪ್ಯಾನ್​ ಇಂಡಿಯಾ ಚಿತ್ರ ಘೋಷಣೆ 'ಆರ್​ಆರ್​ಆರ್' ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ 'ಮೆಗಾ ಪವರ್ ಸ್ಟಾರ್' ರಾಮ್​ ಚರಣ್ ತೇಜ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿನಯದ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಆದ 'ಉಪ್ಪೆನಾ' ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ, ಈಗ ರಾಮ್​ ಚರಣ್​ ಅವರನ್ನು ಈ ಹೊಸ ಚಿತ್ರದಲ್ಲಿ ನಿರ್ದೇಶಿಸಲಿದ್ದಾರೆ. ಪ್ಯಾನ್​ ಇಂಡಿಯಾಗೆ ಆಗುವ ಚಿತ್ರಕಥೆಯೊಂದನ್ನು ಬುಚ್ಚಿ ಬಾಬು ಸಿದ್ಧಪಡಿಸಿದ್ದು, ಈ ಚಿತ್ರದಲ್ಲಿ ನಟಿಸುವುದಕ್ಕೆ ರಾಮ್​ ಚರಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿರುವ ವೆಂಕಟ ಸತೀಶ್ ಕಿಲಾರು ಅವರು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಹೆಸರಿಡದ ಚಿತ್ರದ ಮುಂದಿನ ವರ್ಷ ಪ್ರಾರಂಭವಾಗಲಿದೆ. ಸದ್ಯ ಶಂಕರ್​ ನಿರ್ದೇಶನದ ಪ್ಯಾನ್​ ಇಂಡಿಯಾ ಚಿತ್ರದ ಚಿತ್ರೀಕರಣದಲ್ಲಿ ರಾಮ್​ ಚರಣ್​ ತೇಜ ಭಾಗವಹಿಸಿದ್ದು, ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಅಧಿಕೃತ ಘೋಷಣೆ ಆಗಲಿದೆ. ತಾರಾಗಣ: ರಾಮ್ ಚರಣ್
ರಚನೆ ಮತ್ತು ನಿರ್ದೇಶಕ: ಬುಚ್ಚಿ ಬಾಬು ಸನಾ
ಪ್ರಸ್ತುತಿ: ಮೈತ್ರಿ ಮೂವೀ ಮೇಕರ್ಸ್
ಬ್ಯಾನರ್: ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್
ನಿರ್ಮಾಪಕ: ವೆಂಕಟ ಸತೀಶ್ ಕಿಲಾರು