ಹಳ್ಳೂರ 28:ಆಧುನಿಕ ಸಾಮಾಜಿಕ ಕ್ರಾಂತಿಯ ಮೂಲ ಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕರಾಗಿ ಸಮಾನತೆಯ ಹರಿಕಾರರಾಗಿ ದಿನ ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಶಿಕ್ಷಣದ ಜ್ಯೋತಿ ಬೆಳಗಿಸಿದವರು ಮಹಾತ್ಮ ಜ್ಯೋತಿಭಾ ಪುಲೆ ಎಂದು ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು. ಅವರು ಗ್ರಾಮದ ತೋಟಗೇರ ದೈವ ಸಮುದಾಯದಲ್ಲಿ ಮಹಾತ್ಮ ಜ್ಯೋತಿಭಾ ಪುಲೆ ಅವರ 132 ನೇ ಪುಣ್ಯ ಸ್ಮರಣೆ ನಿಮಿತ್ಯ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಪೂರ್ವಕ ನಮನ ಸಲ್ಲಿಸಿ ಮಾತನಾಡಿ ಮಹಾತ್ಮ ಜ್ಯೋತಿಭಾ ಪುಲೆಯವರು ಜನಸಾಮಾನ್ಯರು, ಡಾಂಬಿಕ, ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮಾರುಹೋಗದೆ ಮಾನವ ಧರ್ಮವನ್ನು ಅಂಗಿಕರಿಸಬೇಕೆಂದು ಅಪೇಕ್ಷೆ ಪಟ್ಟು ಸಮಾಜ ಸುಧಾರಣೆಗೆ ಹಗಲಿರುಳು ಶ್ರಮಿಸಿದವರು ಮಹಾತ್ಮ ಜ್ಯೋತಿಭಾ ಪುಲೆ ಎಂದು ಹೇಳಿದರು. ಮುಖ್ಯೋಪಾಧ್ಯಾಯ ಎಮ್ ಏನ್ ಕುಲಕರ್ಣಿ ಮಾತನಾಡಿ ಸಮಾಜದಲ್ಲಿನ ತಾರ ತಮ್ಯಗಳ ವಿರುದ್ದ ಹೋರಾಡಿ ಶ್ರೇಷ್ಠ ಸಮಾಜ ಸುಧಾರಣೆಗೆ ಶ್ರಮಿಸಿದ ಶಿಕ್ಷಣದ ಹರಿಕಾರರು, ಸಮಾಜ ಸೇವೆ ಮಾಡಿ ಮಹಾತ್ಮರೇಣಿಸಿದ ಶಿಕ್ಷಣದ ತಜ್ಞ ಮಹಾತ್ಮ ಜ್ಯೋತಿಭಾ ಪುಲೆಯವರ ತತ್ವಾದರ್ಶಗಳು ಎಂದೆಂದಿಗೂ ಅನುಕರಣಿಯವಾದದ್ದು ಎಂದು ಹೇಳಿದರು. ಪ್ರಾರಂಭದಲ್ಲಿ ಮಹಾತ್ಮ ಜ್ಯೋತಿಭಾ ಪುಲೆ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶತ ಶತ ನಮನಗಳನ್ನು ಸಲ್ಲಿಸಲಾಯಿತು. ಈ ಸಮಯದಲ್ಲಿ ಶಿವಪ್ಪ ನಿಡೋಣಿ. ಮುಪ್ಪಯ್ಯ ಹಿಪ್ಪರಗಿ. ಶಂಕ್ರಯ್ಯ ಹಿರೇಮಠ.ಗ್ರಾಮ ಪ ಸದಸ್ಯರಾದ ಲಕ್ಷ್ಮಣ ಛಬ್ಬಿ.ಪ್ರದೀಪ ಪಾಲಬಾಂವಿ.ಸಿದರಾಯ ಮರಿಚಂಡಿ. ದುಂಡಪ್ಪ ಹೊಸಟ್ಟಿ. ತುಕಾರಾಮ ಸನದಿ. ಯಲ್ಲಪ್ಪ ಕೂಲಿಗೋಡ.ಹಣಮಂತ ಪಾಲಬಾಂವಿ.ಶ್ರೀಶೈಲ ಹಿರೇಮಠ.ಸೈದುಸಾಬ ಮುಜಾವರ. ಲಕ್ಷ್ಮಣ ಸಪ್ತಸಾಗರ. ರಂಗಪ್ಪ ಸಿಂಪಿ.ಶಂಕರ ಕುಳ್ಳೊಳ್ಳಿ. ಲಕ್ಷ್ಮಣ ಕೂಲಿಗೋಡ. ಅಲ್ಲಪ್ಪ ಕೌಜಲಗಿ. ರಾಮಪ್ಪ ಕೂಲಿಗೋಡ.ಸೇರಿದಂತೆ ಅನೇಕರಿದ್ದರು.
Social Plugin