ಘಟಪ್ರಭಾ: ಮಹಾರಾಷ್ಟ್ರದ ಕೊಲ್ಲಾಪೂರ ಸ್ಪೋರ್ಟ್ ಕ್ಲಬ್ ಅವರು ವರ್ಷಕ್ಕೊಮ್ಮ ನಡೆಸುವ ಹಾಫ್ ಐರನ್ ಡಿಸ್ಟನ್ಸ್ ಟ್ರಿಯ್ಥ್ಲಾನ್ ಸ್ಪರ್ಧೆಯಲ್ಲಿ ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ್ ಬ್ಯಾಕೋಡ ಅವರು ಭಾಗವಹಿಸಿ ವಿಜೇತರಾಗಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ ಪೋಲಿಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದಕ್ಕಾ ಡಿಜಿಪಿ ಕರ್ನಾಟಕ ಅವರು ಶ್ರೀಶೈಲ ಬ್ಯಾಕೂಡ ಅವರಿಗೆ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರವಿವಾರ ಸಂಜೆ ಘಟಪ್ರಭಾ ನಗರಕ್ಕೆ ಆಗಮಿಸಿದ ಬ್ಯಾಕೂಡ ಅವರಿಗೆ ಸ್ಥಳೀಯ ಮುಖಂಡರು ಹಾಗೂ ಪೋಲಿಸ್ ಸಿಬ್ಬಂದಿಗಳಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.

Social Plugin