ಮೂರು ಪ್ರಶಸ್ತಿಗಳು ಈ ಶಾಲೆಗೆ ಬಂದಿದ್ದು ಅತ್ಯಂತ ಮುಂಚೂನಿಯ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಅಂಗವಾಗಿ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ದ್ವಜಾರೋಹಣ ಕಾರ್ಯಕ್ರಮದಲ್ಲಿ ತೇರದಾಳದ ವಿವೇಕಾನಂದ ಇಂಟರ್‌ ನ್ಯಾಷನಲ್ ಪಬ್ಲಿಕ್ ಶಾಲೆಯು ಭಾಗವಹಿಸಿದ್ದು ಅಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪರೇಡ್‌ನಲ್ಲಿ ಪ್ರಥಮ ಸ್ಥಾನ ಮತ್ತು ಪ್ರೌಢಶಾಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪ್ರಾಥಮಿಕ ವಿಭಾಗದ ಪರೇಡ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಈ ಮೂರು ಪ್ರಶಸ್ತಿಗಳು ಬಂದಿರುವುದು ತುಂಬಾ ಸಂತೋಷಕರ ವಿಷಯವಾಗಿದ್ದು, ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯು ಈ ಮೊದಲು ಸ್ವಚ್ಛ ವಿದ್ಯಾಲಯ ಪುರಸ್ಕಾರ ಬಿರುದು ಪಡೆಡಿದ್ದು ಇದನ್ನು ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ಇವರು ಹಸ್ತಾಂತರಿಸಿದರು, ತದನಂತರ ದಿನಗಳಲ್ಲಿ ಈ ಮೂರು ಪ್ರಶಸ್ತಿಗಳು ಈ ಶಾಲೆಗೆ ಬಂದಿದ್ದು ಅತ್ಯಂತ ಮುಂಚೂನಿಯ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ. ಪಠ್ಯ ಅಷ್ಟೆ ಅಲ್ಲದೆ ಪಠ್ಯತರ ಚಟುವಟಿಕೆಯಲ್ಲು ಮುಂದಿದೆ ಎಂದು ತೋರಿಸಿ ಕೊಟ್ಟಿದೆ. ಅದರಂತೆ ಉತ್ತಮ ಸಮಾಜಕ್ಕಾಗಿ ಉತ್ತಮ ವಿದ್ಯಾರ್ಥಿಗಳ ಸರ್ವಾಂಗಿನ ಅಭಿವೃದ್ಧಿಗಾಗಿ ಈ ಶಾಲೆ ಶ್ರಮಿಸುತ್ತಿದ್ದು, ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಚೇರಮನ್ನರಾದ ಶ್ರೀ ಶಂಕರ ಮಂಗಸೂಳಿಯವರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಪ್ರಶಸ್ತಿಗಳಿಸಿದ ಶಿಕ್ಷಕರು ಮತ್ತು ಮಕ್ಕಳಿಗೆ ಸಿಹಿ ನೀಡುವುದರ ಮೂಲಕ ಶ್ಲಾಘಿಸಿದರು. ಅದರಂತೆ ವಿವೇಕಾನಂದ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲಕರಾದ ಶ್ರೀ ಜ್ವಾಯ್ ಸೇಬಸ್ಟಿಯನ್ ಸರ್ ಅವರು ಕೂಡಾ ಮಕ್ಕಳಿಗೆ ಅಭಿನಂದನೆಗೆ ಸಲ್ಲಿಸಿದರು.