ಬನಹಟ್ಟಿಯಲ್ಲಿ `ಪಶು ಸಂಜೀವಿನಿ’ ವಾಹನಕ್ಕೆ ಶಾಸಕ ಸಿದ್ದು ಸವದಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
`ಪಶು ಸಂಜೀವಿನಿ’ ವಾಹನ ಸೇವೆಗೆ ಚಾಲನೆ
ರಬಕವಿ-ಬನಹಟ್ಟಿ,ಅ1: ರಬಕವಿ-ಬನಹಟ್ಟಿ ತಾಲೂಕಾ ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಂಡು ಫುಲ್ ಗರಂ ಆದ ಶಾಸಕ ಸಿದ್ದು ಸವದಿ, ಮೇಲಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಶೀಘ್ರವೇ ವೈದ್ಯ ಹಾಗು ಸಿಬ್ಬಂದಿಗಳನ್ನು ನೇಮಿಸುವ ಮೂಲಕ ತಾಲೂಕಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬನಹಟ್ಟಿಯ ಪಶು ಆಸ್ಪತ್ರೆಯಲ್ಲಿ `ಪಶು ಸಂಜೀವಿನಿ’ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಮಾತನಾಡಿ, ಶಸ್ತ್ರ ಚಿಕಿತ್ಸೆ ಘಟಕ ಸೇರಿ ವಿವಿಧ ಆರೋಗ್ಯ ಸೇವೆ ಹೊಂದಿರುವ ಪಶು ಸಂಜೀವಿನ ವಾಹನ ಈ ಭಾಗದ ರೈತರ ಜಾನುವಾರುಗಳಿಗೆ ವರವಾಗಲಿದೆ. ಗೋವಿನ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಪಶು ಚಿಕಿತ್ಸಾಲಯಕ್ಕೆ ಸಾಗಾಣಿಕೆ ಮಾಡಲು ತೊಂದರೆಯಿದ್ದಲ್ಲಿ 1962 ಕ್ಕೆ ರೈತರು ಕರೆ ಮಾಡಿದ್ದಲ್ಲಿ ಶಸ್ತ್ರ ಚಿಕಿತ್ಸೆಯ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ವಾಹನ ತಜ್ಞರೊಂದಿಗೆ ರೈತರ ಮನೆ ಬಾಗಿಲಿಗೆ ಹೋಗಿ ಶಸ್ತ್ರ ಚಿಕಿತ್ಸೆಯ ಸೌಕರ್ಯ ಒದಗಿಸಲಿದೆ ಎಂದರು.
ರಾಜು ಅಂಬಲಿ, ಮಲ್ಲಿಕಾರ್ಜುನ ಬಾನಕಾರ, ಧರೆಪ್ಪ ಉಳ್ಳಾಗಡ್ಡಿ, ಸಿದ್ದು ಗೌಡಪ್ಪನವರ, ಗೌರಿ ಮಿಳ್ಳಿ, ಭೀಮಶಿ ಪಾಟೀಲ, ಭೀಮಶಿ ಹಂದಿಗುಂದ, ಸ್ಥಾಯಿ ಸಮಿತಿ ಚೇರಮನ್ ಸದಾಶಿವ ಪರೀಠ, ಈಶ್ವರ ಪಾಟೀಲ, ಯಲ್ಲಪ್ಪ ಕಟಗಿ ಸೇರಿದಂತೆ ಅನೇಕರಿದ್ದರು.

Social Plugin