ತೇರದಾಳದ ಆಯ್‍ಟಿಆಯ್ ಕಾಲೇಜಿನ ಹತ್ತಿರವಿರುವ ಪುರುಷರ ಹಾಗೂ ಮಹಿಳಾ ಶೌಚ್ಚಾಲಯ ನೀರಿಲ್ಲದೆ ತುಂಬಿಕೊಂಡಿದೆ.
ನೀರಿಲ್ಲದೆ ಗಬ್ಬೆದ್ದು ನಾರುತ್ತಿರುವ ಶೌಚ್ಚಾಲಯ
ತೇರದಾಳ : ಪಟ್ಟಣದ ಆಯ್‍ಟಿಆಯ್ ಕಾಲೇಜಿನ ಹತ್ತಿರವಿರುವ ಪುರುಷರ ಹಾಗೂ ಮಹಿಳಾ ಶೌಚ್ಚಾಲಯಕ್ಕೆ ಕಳೆದೆರೆಡು ತಿಂಗಳಿಂದ ನೀರಿಲ್ಲದೆ ಗಬ್ಬೆದ್ದು ನಾರುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
ಪುರುಷರ ಹಾಗೂ ಮಹಿಳಾ ಶೌಚ್ಚಾಲಯಕ್ಕೆ ಕಳೆದೆರಡು ತಿಂಗಳಿಂದ ನೀರು ಸರಬರಾಜು ನಿಂತು ಹೋಗಿದೆ. ನೀರಿಲ್ಲದೆ ಶೌಚ್ಚಾಲಯ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಈ ಪುರುಷರ ಹಾಗೂ ಮಹಿಳಾ ಶೌಚ್ಚಾಲಯ ಮೂರು ವಾರ್ಡಿನ ಜನರಿಗೆ ಅನುಕೂಲವಾಗಿತ್ತು. ಆದರೆ ಕಳೆದೆರಡು ತಿಂಗಳಿಂದ ನೀರು ಸರಬರಾಜು ಇಲ್ಲದೇ ಇರುವುದರಿಂದ ಶೌಚ್ಚಾಲಯಗಳು ಗಬ್ಬೆದ್ದು ನಾರುತ್ತಿವೆ. ಇಲ್ಲಿ ನೀರು ಸರಬರಾಜು ಇಲ್ಲದೆ ಶೌಚ್ಚಾಲಯಗಳು ತುಂಬಿಕೊಂಡು ಸ್ವಚ್ಚತೆ ಇಲ್ಲದೇ ಇರುವುದರಿಂದ ಜನರು ಶೌಚ್ಚಕ್ಕೆ ಹೊರಗೆ ಹೋಗುತ್ತಿದ್ದಾರೆ. ಮಹಿಳೆಯರು ಕಲ್ಲಟ್ಟಿ ಭಾಗದಲ್ಲಿರುವ ಶೌಚ್ಚಾಲಯಕ್ಕೆ ಹೋಗುತ್ತಿದ್ದಾರೆ.
ಸುಮಾರು 20ರಿಂದ 25 ಶೌಚ್ಚಾಲಯಗಳು ಈ ಭಾಗದಲ್ಲಿರುವುದರಿಂದ ಇದು ಮೂರು ವಾರ್ಡಿಗೆ ಅನುಕೂಲವಾಗಿತ್ತು. ಆದರೆ ಬಯಲು ಬಹಿರ್ದೆಸೆಗೆ ಎಲ್ಲಿಯೂ ಜಾಗ ಇಲ್ಲದೆ ಇರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಆದರೆ ಸ್ವಚ್ಚತೆ ಇಲ್ಲದೇ ಇರುವುದರಿಂದ ಇಲ್ಲಿನ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಈ ವಾರ್ಡಿನ ಸದಸ್ಯರಿಗೆ ಈ ಕುರಿತು ಸಮಸ್ಯೆಯನ್ನು ಹೇಳಿದರೆ ಯಾವುದು ಪ್ರಯೋಜನವಾಗಿಲ್ಲ. ಶೌಚಾಲಯದ ಪಕ್ಕದಲ್ಲಿಯೇ ಜನರು ದಾಟಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ಇದರಿಂದ ಗಬ್ಬೆದ್ದು ನಾರುತ್ತಿರುವುದರಿಂದ ದೇವಸ್ಥಾನಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ ಆದಷ್ಟು ಬೇಗನೆ ಶೌಚಾಲಯವನ್ನು ಸ್ವಚ್ಚಗೊಳಿಸಿ ಅದಕ್ಕೆ ನೀರಿನ ವ್ಯವಸ್ಥೆಯನ್ನು ಮಾಡಬೇಕು ಹಾಗೂ ರಾತ್ರಿ ಸಮಯದಲ್ಲಿ ಶೌಚ್ಚಕ್ಕೆ ಹೋಗಲು ಬೆಳಕಿನ ವ್ಯವಸ್ಥೆಯನ್ನು ಮಾಡಿ ಜನರಿಗೆ ಅನುಕೂಲ ಮಾಡಕೊಡಬೇಕು ಎಂಬುದು ಇಲ್ಲಿನ ಜನರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Social Plugin