ಬೆಂಗಳೂರು : ಮಾಧ್ಯಮ ಎಂಬುದೇ ದೊಡ್ಡ ಸಾಗರ. ಜಗತ್ತಿನ ಯಾವುದೇ ಮೂಲೆಯಲ್ಲಿನ ಘಟನೆಗಳನ್ನು ಕ್ಷಣ ಮಾತ್ರದಲ್ಲಿ ಜನರಿಗೆ ತಲುಪಿಸುವ ಮಹಾನ್ ಶಕ್ತಿ. ಈ ಕೆಲಸ ನಡೆಯಲು ಅನೇಕಾನೇಕ ಜನರ ಪರಿಶ್ರಮವಿರುತ್ತದೆ. ಅಂತಹ ವಿಶೇಷ ಶ್ರಮಿಕರನ್ನು ಗುರುತಿಸಿ ಟಿಎನ್ ಐಟಿ (TNIT) ಮೀಡಿಯಾ ಸಂಸ್ಥೆ ಹಲವು ವರ್ಷಗಳಿಂದ ಮಾಧ್ಯಮದ ಹಲವಾರು ವಿಭಾಗಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ದಿನಾಂಕ: 22-12-2021 ರಂದು ಸಾಯಂಕಾಲ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ TNIT ಸಂಸ್ಥೆಯ CEO ಶ್ರೀ ರಘು ಭಟ್ ದಂಪತಿಗಳು ವಿಶೇಷವಾಗಿ ನಡೆಸಿ ತಮ್ಮ ಸೇವೆ ಮುಂದುವರೆಸಿದ್ದಾರೆ. ಅವರಿಗೆ ವಿಕ್ರಂ ಸೂರಿ, ನಮಿತಾ ರಾವ್ ಅವರ ಬೆನ್ನೆಲುಬು, ಜೊತೆಗೆ ಈ ಕಾರ್ಯಕ್ರಮದಲ್ಲಿ ಕನ್ನಡ ಸುದ್ದಿ ಮಾಧ್ಯಮದ ದಿಗ್ಗಜರು ಎಲ್ಲರು ಒಟ್ಟಿಗೆ ಸೇರಿದ್ದು ವಿಶೇಷ ಅಲ್ಲದೇ, ವಿಶೇಷ ಅತಿಥಿಗಳಾಗಿ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರಿಗೆ,
ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಶ್ರೀ ಸದಾಶಿವ ಮಹಾಸ್ವಾಮಿಗಳವರಿಗೆ ಮತ್ತು ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಸಿಡಿಗಳಲೆ ಮಠದ ಶ್ರೀ ಶ್ರೀ ಇಮ್ಮಡಿ ಶಿವಲಿಂಗ ಮಹಾಸ್ವಾಮಿಗಳು, ಹಿರಿಯ ಪತ್ರಕರ್ತರು ಶ್ರೀ ಗಣೇಶ ಕಾಸರಗೋಡು, ಶ್ರೀ ಈಶ್ವರ ದೈತೋಟ, ಸಬಿಹಾ ಬಾನು, ಪ್ರೋ. ದೊಡ್ಡರಂಗೇಗೌಡ್ರು, ನಾಗತಿಹಳ್ಳಿ ಚಂದ್ರಶೇಖರ ಸೇರಿದಂತೆ ಚಿತ್ರನಟರಾದ ರಾಘವೇಂದ್ರ ರಾಜಕುಮಾರ, ದೊಡ್ಡಣ್ಣ, ಲವ್ಲಿ ಸ್ಟಾರ್ ಪ್ರೇಮ್, ವಶಿಷ್ಠ ಸಿಂಹ, ನಿಖಿಲ್ ಕುಮಾರ್, ಮೇಘನಾ ಗಾಂವಕರ್ ಸೇರಿದಂತೆ ಮುಂತಾದವರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತರುವುದರ ಜೊತೆಗೆ ಕಾರ್ಯಕ್ರಮದ ಕುರಿತು ಮತ್ತು ಪ್ರಶಸ್ತಿ ಪಡೆದವರ ಕುರಿತು ಮಾತನಾಡಿ ಶುಭಹಾರೈಸಿದರು.
22-12-2021

Social Plugin