ತೇರದಾಳದ ವಿರಕ್ತಮಠದ ಶ್ರೀಶಿವಕುಮಾರ ದೇವರು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿಯವರನ್ನು ಸನ್ಮಾನಿಸಿದರು.
ಜಿಲ್ಲೆಯ ತುಂಬ ನಿರಂತರ ಸಾಹಿತ್ಯ ಚಟುವಟಿಕೆಗಳು ನಡೆಯಲಿವೆ-ಶೆಲ್ಲಿಕೇರಿ
ತೇರದಾಳ : ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣಾ ಸಂದರ್ಭದಲ್ಲಿ ಪ್ರಕಟಿಸಿದ ಪ್ರಣಾಳಿಕೆಯಂತೆ ನಿರಂತರ ಸಾಹಿತ್ಯಿಕ ಚಟುವಟಿಕೆಗಳು ಜಿಲ್ಲೆಯಾದ್ಯಂತ ನಡೆಸಲು ಬದ್ಧನಾಗಿರುವೆ. ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಕಲಾವಿದರಿಗೆ, ಯುವಬರಹಗಾರರಿಗೂ ವೇದಿಕೆ ಕಲ್ಪಿಸಲಾಗುವುದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ನೂತನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಇಲ್ಲಿಯ ವಿರಕ್ತಮಠದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡುವೆ ಎಂದರು.
ವಿರಕ್ತಮಠದ ಶ್ರೀಶಿವಕುಮಾರ ದೇವರು ಸಾನಿಧ್ಯ ವಹಿಸಿ ಮಾತನಾಡಿ ಜನಮನಕ್ಕೆ ಹಿತವೆನಿಸುವ, ಸಂದೇಶ ನೀಡುವ, ಮನಮುಟ್ಟುವ ಸಾಹಿತ್ಯ ಚಟುವಟಿಕೆಗಳು ನಿರಂತರ ನಡೆಯುವಂತಾಗಲಿ ಎಂದರು.
ವಿನೋದ ಸಾಹಿತಿ ಯಶವಂತ ವಾಜಂತ್ರಿ ಮಾತನಾಡಿ ವಿನಯಕ್ಕೆ ಇನ್ನೊಂದು ಹೆಸರು ಶಿವಾನಂದ ಶೆಲ್ಲಿಕೇರಿಯಾಗಿದ್ದಾರೆ. ಅವರ ಗುಣ, ಸ್ವಭಾವ, ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದರಿಂದ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದರು.
ಮಾರುತಿ ಹೂಗಾರ ಮಾತನಾಡಿ ಈ ಹಿಂದಿನ ಜಿಲ್ಲಾಧ್ಯಕ್ಷರಾಗಿದ್ದ ಒಬ್ಬರು ಫೋನ್ ಮಾಡಿದರೆ ಸರಿಯಾಗಿ ಸ್ಪಂಧಿಸಿಲ್ಲ ಹಾಗೇ ತಾವು ಮಾಡದೇ, ಎಲ್ಲರ ವಿಚಾರಗಳನ್ನು ಕೇಳಿ, ನಾವು ಕೂಡಾ ಸಾಹಿತ್ಯಿಕ ಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೇವೆ ಎಂದರು.
ಮಲ್ಲಿನಾಥ ಬೋಳಗೊಂಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಕಲಾವಿದ ರಾಯಪ್ಪ ಕುಂಬಾರ ಮಾತನಾಡಿದರು.
ಕ್ಷೇತ್ರಾಧಿಪತಿ ದರ್ಶನ : ಕಸಾಪ ನೂತನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿಯವರು ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ದೇವಾಲಯ ಭೇಟಿ ನೀಡಿ, ಗದ್ದುಗೆ ದರ್ಶನ ಮಾಡಿದರು. ವೇದಮೂರ್ತಿ ಮಗಯ್ಯ ಸ್ವಾಮಿಗಳು ತೆಳಗಿನಮನಿ ದೇವಾಲಯ ಸಮಸ್ತ ಅರ್ಚಕರ ವತಿಯಿಂದ ಸನ್ಮಾನಿಸಿದರು.
Social Plugin