ತೇರದಾಳದ ಗುಂಡಲ ಭಾವಿಗೆ ಹೋಗುವ ರಸ್ತೆ ಅಗೆದು ಬಿಟ್ಟಿದ್ದರಿಂದ ರೈತರಿಗೆ ತೊಂದರೆಯಾಗಿದೆ.
ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲು ಒತ್ತಾಯ
ತೇರದಾಳ : ಪಟ್ಟಣದಿಂದ ಗುಂಡಲ ಭಾವಿಗೆ ಹೋಗುವ ರಸ್ತೆ ದುರಸ್ತಿ ಹಾಗೂ ಡಾಂಬರಿಕರಣ ಮಾಡಲು ರಸ್ತೆಯನ್ನು ಅಗೆದು ಬಿಟ್ಟಿದ್ದರಿಂದ ರೈತರ ಕಬ್ಬಿನ ಟ್ರಾಕ್ಟರ್‍ಗಳು ಹಾಗೂ ದ್ವಿಚಕ್ರ ವಾಹನಗಳು ಹೋಗಲು ತೊಂದರೆಯಾಗಿದೆ. ರಸ್ತೆಯನ್ನು ಬೇಗನೆ ಪೂರ್ಣಗೊಳಿಸುವಂತೆ ಅಲ್ಲಿನ ರೈತರು ಒತ್ತಾಯಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೆ ಈ ರಸ್ತೆ ಕಾಮಗಾರಿಗೆ 5ಲಕ್ಷ ರೂ. ಅನುದಾನದಲ್ಲಿ ಭೂಮಿ ಪೂಜೆ ಮಾಡಿ ಡಾಂಬರೀಕರಣ ಮಾಡಲು ರಸ್ತೆ ಅಗೆದು ಬಿಟ್ಟಿದ್ದಾರೆ. ಎರಡು ತಿಂಗಳಿನಿಂದ ರಸ್ತೆ ಕಾಮಗಾರಿಯು ಸ್ಥಗಿತವಾಗಿದೆ, ಹಾಗೂ ಅಂದಿನಿಂದ ಇಂದಿನವರೆಗೆ ಗುತ್ತಿಗೆದಾರರು ಈ ಕಡೆಗೆ ಬಂದಿಲ್ಲಬೆಂದು ಅವರು ಆರೋಪಿಸಿದ್ದಾರೆ. ಈಗ ಕಬ್ಬಿನ ಹಂಗಾಮು ಇರುವುದರಿಂದ ಕಬ್ಬನ್ನು ತುಂಬಿಕೊಂಡು ಟ್ರಾಕ್ಟರ್ ಹೋಗಲು ತೊಂದರೆಯಾಗುತ್ತಿದೆ ಆದ್ದರಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಿ ಮುಗಿಸುವಂತೆ ಅಲ್ಲಿನ ರೈತರು ಒತ್ತಾಯಿಸಿದ್ದಾರೆ.
ತೋಟದ ವಸತಿ ಪ್ರದೇಶದಲ್ಲಿರುವ ಜನರಿಗೆ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ಟ್ಟಣಕ್ಕೆ ಹೋಗಬೇಕಾದರೆ ಹರ ಸಾಹಸ ಪಡಬೇಕಾಗಿದೆ. ಹಾಗೂ ಕಬ್ಬು ತುಂಬಿದ ಟ್ರಾಕ್ಟರ್ ಮಳೆಯಾದ ಸಂದರ್ಭದಲ್ಲಿ ತೋಟದಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಬರುತ್ತಿದೆ ಆದಷ್ಟು ಬೇಗನೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಲ್ಲಿನ ರೈತರು ಒತ್ತಾಯಿಸಿದ್ದಾರೆ.

Social Plugin