ಲೋಕೋಪಯೋಗಿ ಇಲಾಖೆಯಡಿ ತೇರದಾಳ-ಸಸಾಲಟ್ಟಿ ಮುಖ್ಯ ರಸ್ತೆ ಸುಧಾರಣೆಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮಾಂತರ ಪ್ರದೇಶಗಳ ರಸ್ತೆ ಸುಧಾರಣೆಗೆ ಪ್ರಥಮ ಆದ್ಯತೆ : ಸಿದ್ದು ಸವದಿ
ತೇರದಾಳ : ಗ್ರಾಮಾಂತರ ಪ್ರದೇಶಗಳಲ್ಲಿ ಬಹುಪಾಲು ಭೂಮಿ ನೀರಾವರಿ ಇರುವುದರಿಂದ ರಸ್ತೆಗಳು ಬೇಗನೆ ಹಾಳಾಗುತ್ತಿದ್ದು, ರೈತರ ಅನುಕೂಲಕ್ಕಾಗಿ ಸರ್ಕಾರ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಗುತ್ತಿಗೆದಾರರು ಸಕಾಲದಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಲೋಲೋಪಯೋಗಿ ಇಲಾಖೆಯ 2021-22ನೇ ಸಾಲಿನ ಅಪೆಂಡಿಕ್ಸ್-ಇ 5054ರ ಯೋಜನೆಯಲ್ಲಿ 60 ಲಕ್ಷ ಅನುದಾನದಲ್ಲಿ ತೇರದಾಳ-ಸಸಾಲಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸರ್ಕಾರದ ಯಾವುದೇ ಕೆಲಸಗಳು ಈಗ ವಿಳಂಭಕ್ಕೆ ಆಸ್ಪದವಿಲ್ಲದಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆದೇಶಿಸಿದ್ದು, ಗುತ್ತಿಗೆದಾರರು ವಿಳಂಭ ಮಾಡದೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆಯನ್ನು ಶೀಘ್ರವೇ ನಿರ್ಮಿಸಿಕೊಡಬೇಕೆಂದು ಸೂಚಿಸಿದರು.
ಮಹೇಶ ಹಿರೇಮಠ ಪೂಜೆ ನೆರವೇರಿಸಿದರು. ಮುಖಂಡರಾದ ಶಿವಲಿಂಗ ನಿರ್ವಾಣಿ, ಪ್ರಭು ಮದಲಮಟ್ಟಿ, ಮಲ್ಲೇಶ ಉಳ್ಳಾಗಡ್ಡಿ, ಸಿದ್ದಬೀರಪ್ಪ ಶೇಗುಣಸಿ, ಮುತ್ತು ಭದ್ರಶೆಟ್ಟಿ, ಗುರುಬಸು ಹುಕ್ಕೇರಿ, ರಾಜು ಬೆಳವಣಕಿ, ನಿಂಗಪ್ಪ ಇಂಗಳೆ, ಗುರುಪಾದ ಶಿವಣ್ಣವರ, ಭೀಮು ಯರಡತ್ತಿ ಸೇರಿದಂತೆ ಇಲಾಖೆ ಅಧಿಕಾರಿಗಳಾದ ಪಿ.ಎಚ್.ಗಾಯಕವಾಡ, ಎಸ್.ವೈ. ಬಿರಾದಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ಪಿಡಿಒ ಸಂತೋಷ ಪೂಜಾರಿ, ಗುತ್ತಿಗೆದಾರ ಕೆ.ಎಲ್.ಕಂಕಾಳೆ ಹಾಗೂ ಇನ್ನಿತರರು ಇದ್ದರು.

Social Plugin