ಹಳ್ಳೂರ 12:ಗ್ರಾಮದ ಬಿ ಕೆ ಎಮ್ ಪ್ರೌಢ ಶಾಲೆ ಆವರಣದಲ್ಲಿ ಶಾಲೆಯ ಸಂಸ್ಥಾಪಕರು ಹಾಗೂ ಭೂದಾನಿಗಳಾದ ದಿ ಬಲವಂತರಾವ ಮತ್ತು ವಸಂತರಾವ ಕುಲಕರ್ಣಿ ಯವರ ಮೂರ್ತಿ ಪ್ರತಿಷ್ಠಾಪನೆಯನ್ನು ಬಾಗಲಕೋಟಿಯ ಪುಂಡಲೀಕ ಶರಣರ ಅಮೃತ ಹಸ್ತದಿಂದ ನೆರವೇರಿಸಿ ಮಾತನಾಡಿ ಶಾಲೆ ಕಟ್ಟಡಕ್ಕೆ ಭೂದಾನವನ್ನು ಮಾಡಿದ ಕುಲಕರ್ಣಿ ಕುಟುಂಬದವರು ಪುಣ್ಯವಂತರು. ವಿದ್ಯೆಯುಳ್ಳವನ ಬಾಳು ಬಂಗಾರ ತಾಯಿ ತಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವದರ ಜೊತೆಗೆ ಸಂಸ್ಕಾರ ಕಲಿಸಬೇಕೆಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮಣ್ಣಿಕೇರಿ ಮಾತನಾಡಿ ಈ ಶಿಕ್ಷಣ ಸಂಸ್ಥೆಯು ಬಹಳ ಮುಂಚೂಣಿಯಲ್ಲಿದೆ.ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು.ಇಬ್ಬರ ಮಹನೀಯರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. ಒಳ್ಳೆಯ ಶಿಕ್ಷಣ ಕಲಿತು ಉನ್ನತ ಮಟ್ಟಕ್ಕೆ ಈಗಿನ ಯುವಕರು ಬೆಳೆಯಬೇಕೆಂದು ಹೇಳಿದರು. ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಹಾಗೂ ಸುರೇಶ ಸಂತಿ ಮಾತನಾಡಿ ಇದೆ ಶಾಲೆಯಲ್ಲಿ ಕಲಿತು ನಾವು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು. ಪ್ರಾರಂಭದಲ್ಲಿ ಕುಲಕರ್ಣಿ ಯವರ ಮನೆಯಿಂದ ಶಾಲೆಯವರೆಗೆ ಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ತರಲಾಯಿತು. ಇದೆ ಸಂದರ್ಭದಲ್ಲಿ ನಿಂಗಪ್ಪ ಕುರಬೇಟ.ಬಿ ಕೆ ಎಮ್ ಪ್ರೌಢ ಶಾಲೆಯ ಅಧ್ಯಕ್ಷ ಶ್ರೀಮತಿ ಎಸ್ ವಿ ಕುಲಕರ್ಣಿ. ಮುಕ್ಯೋಪಾಧ್ಯಾಯ ಎಮ್ ಏನ್ ಕುಲಕರ್ಣಿ. ಪ್ರಕಾಶ ಹೆಗ್ಗಣ್ಣವರ. ಸುರೇಶ ಮಗದುಮ್.ಹಣಮಂತ ತೇರದಾಳ.ಸುರೇಶ ಕತ್ತಿ.ಶಿವನಗೌಡ ಪಾಟೀಲ. ಮಾದೇವ ಹೊಸಟ್ಟಿ.ಶ್ರೀಶೈಲ ಬಾಗೋಡಿ. ಬಸಪ್ಪ ಹಡಪದ. ಮುಪ್ಪಯ್ಯ ಹಿಪ್ಪರಗಿ. ಎಸ್ ಬಿ ಗುರ್ಲಾಪುರ. ಮುರಿಗೆಪ್ಪ ಮಾಲಗಾರ.ಭೀಮಪ್ಪ ಡಬ್ಬನವರ ಸಿದ್ದು ದುರದುಂಡಿ. ತೆಲಸಂಗ ಸರ ಸೇರಿದಂತೆ ಶಿಕ್ಷಕರು ಆಡಳಿತ ಮಂಡಳಿಯವರಿದ್ದರು.