ತೇರದಾಳ ಸಮೀಪದ ಗೋಲಭಾವಿ ಗ್ರಾಮದ ಸರಕಾರಿಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬಿಇಓ ಹಾಗೂ ತಂಡದವರು ನಲಿಕಲಿ ಕೊಠಡಿಯಲ್ಲಿ ಟಿಎಲ್‍ಎಂ ವೀಕ್ಷಣೆ ಮಾಡುತ್ತಿರುವುದು,

ಮಿಂಚಿನ ಸಂಚಾರ ಶಾಲೆಗೆ ಭೇಟಿ ನೀಡಿದ ಬಿಇಓ ಸಿ ಎಂ ನ್ಯಾಮಗೌಡ

ತೇರದಾಳ : ಇಲ್ಲಿಗೆ ಸಮೀಪದ ಗೋಲಭಾವಿ ಗ್ರಾಮದ ಸರಕಾರಿಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಮಿಂಚಿನ ಸಂಚಾರಕಾರ್ಯಕ್ರಮದ ಅಡಿ ಮಂಗಳವಾರ  ಬಿಇಓ ಸಿ.ಎಂ.ನ್ಯಾಮಗೌಡ ಹಾಗೂ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

   ಶಾಲಾ ಕೈ ತೋಟ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು, ಸಿಆರ್‍ಪಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಕಾರ್ಯದ ಬಗ್ಗೆ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು ತದನಂತರ ನಲಿಕಲಿ ವರ್ಗದಕೋಣೆಗೆ ತೆರಳಿ ಅಲ್ಲಿಗುರುಮಾತೆಯರುನೂತನವಾಗಿರಚಿಸಿರುವ ಟಿಎಲ್‍ಎಂ ಪರಿಕರಗಳ ಕುರಿತು ಮಾಹಿತಿ ಪಡೆದು ಪ್ರಶಂಶಿಸಿದರು.

   ಮಕ್ಕಳ ಅಧ್ಯಯನಕುರಿತಾಗಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀಶೈಲ ಬುರ್ಲಿ,ಆರ್‍ಟಿಇ ನೋಡಲ್‍ಅಧಿಕಾರಿ ಆರ್. ಎಂ ಸಂಪಗಾಂವ, ಸಿಆರ್‍ಪಿಗಳಾದ ಭರತೇಶ ಯಲ್ಲಟ್ಟಿ, ಎಸ್.ಬಿ.ಮೋಮಿನ್, ಮುಖ್ಯಗುರು ಎಸ್.ಜಿ.ನವಿಲ್ಯಾಳ, ಎನ್.ಎಂ.ಘಾಶನ್, ಎಸ್.ಬಿ. ಪುಲೋಜಿ. ಜಿ.ಬಿ.ಸಂಗೊಂದಿ, ಕೆ.ಪಿ.ಪೂಜಾರಿ, ಎ.ಎಸ್.ಕೇಸ್ಕರ, ಬಿ.ಎನ್.ವಾಜಂತ್ರಿ, ಕೆ.ಎಂ.ಆಸಂಗಿ, ಜೆ.ಎ.ತಹಸೀಲ್ದಾರ, ಸಿ.ಜಿ.ಕಾರಜೋಳ, ಆಯ್.ಎನ್.ಲಟ್ಟಿ ಇದ್ದರು.

-------------------------