ಹಳಿಂಗಳಿಯ ಶ್ರೀಗುರು ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ "ಧರೆಗೆ ದೊಡ್ಡವರು" ಎಂಬ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅದು ಇಂದು ಸಮಾರೋಪಗೊಂಡಿದೆ, ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ವಹಿಸಿದ್ದ ಮಹಾವೀರ ಪ್ರಭುಗಳು ಮಾತನಾಡಿ ದೇವರು ನಮಗೆ ಕಿವಿಗಳನ್ನು ಕೊಟ್ಟಿರುವುದು ಒಳ್ಳೆಯ ಮಾತುಗಳನ್ನು ಕೇಳುವುದಕ್ಕಾಗಿ ಅದಕ್ಕಾಗಿಯೇ ನಮ್ಮ ಹಿರಿಯರು ಶ್ರಾವಣಮಾಸ ಎಂಬ ಅದ್ಭುತ ಪರಿಕಲ್ಪನೆಯನ್ನು ತಂದರು ಇದರ ಅನುಸಾರ 11 ತಿಂಗಳು ನಮ್ಮ ಜೀವನದಲ್ಲಿ ನಾವು ಮಿಂದೆದ್ದರು ಒಂದು ತಿಂಗಳಾದರೂ ಪರಮಾತ್ಮನ ಸಂಕೀರ್ಥನ ಅವಕಾಶ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರವಚನದ ಮಂಗಲ ನುಡಿಗಳನ್ನಾಡಿದ ಬಸವ ರಾಜೇಂದ್ರ ಶರಣರು ಬದುಕು ಬಂಗಾರ ವಾಗಬೇಕಾದರೆ ಮಹಾತ್ಮರ ದಾರ್ಶನಿಕರ ಚಿಂತನೆಗಳನ್ನು ಕೇಳುವಂತಾಗಬೇಕು, ಆ ಚಿಂತನೆಗಳು ಮನುಷ್ಯನನ್ನು ಮಹಾತ್ಮ ಮಾಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಳಂಗಳಿ ಯ ಯುವ ಮುಖಂಡರಾದ ರಾಜು ನಂದೆಪ್ಪನವರ್ ಭಾಗವಹಿಸಿ ಶರೀರ ಇರುವುದು ಪರಮಾತ್ಮನ ಸೇವೆಗೆ ಅದನ್ನು ನಾವು ನೆನಪಿಡಬೇಕು ಎಂದರು.. ಎಂ ಆರ್ ಖಾನ್. ಧಾರವಾಡ್ಕರ್ . ಆದೇಶ್ ಕುಳ್ಳಿ. ಸಾಗರ್ ಸಪ್ತಸಾಗರ. ಬಸಯ್ಯ ಸ್ವಾಮಿಗಳು ಮಠಪತಿ ಇನ್ನಿತರರಿದ್ದರು.. ಕಾರ್ಯಕ್ರಮದಲ್ಲಿ ಮಕ್ಕಳ ವೇಷಭೂಷಣ ಆಕರ್ಷಣೀಯವಾಗಿತ್ತು.

Social Plugin